ADVERTISEMENT

ಭಾರತದ ಅರ್ಥವ್ಯವಸ್ಥೆ ಜಪಾನ್‌ಗಿಂತ ದೊಡ್ಡದು: ಶಮಿಕಾ ರವಿ

ಪಿಟಿಐ
Published 3 ಜೂನ್ 2025, 13:38 IST
Last Updated 3 ಜೂನ್ 2025, 13:38 IST
   

ನವದೆಹಲಿ: ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬಹುದೊಡ್ಡ ಭಾಗವು ಲೆಕ್ಕಕ್ಕೆ ಸಿಗುತ್ತಿಲ್ಲದೆ ಇದ್ದರೂ, ಭಾರತವು ಈಗಾಗಲೇ ವಿಶ್ವದ ನಾಲ್ಕನೆಯ ಅತಿದೊಡ್ಡ ಅರ್ಥವ್ಯವಸ್ಥೆ ಆಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ (ಇಎಸಿ–ಪಿಎಂ) ಸದಸ್ಯೆ ಶಮಿಕಾ ರವಿ ಹೇಳಿದ್ದಾರೆ.

ಭಾರತವು 2025ರ ಅಂತ್ಯದ ವೇಳೆಗೆ ಜಗತ್ತಿನ ನಾಲ್ಕನೆಯ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಅರವಿಂದ ವಿರಮಾನಿ ಅವರು ಮೇ 26ರಂದು ಹೇಳಿದ್ದರು. ಭಾರತವು ಜಪಾನ್ ದೇಶವನ್ನು ಹಿಂದಿಕ್ಕಿ ನಾಲ್ಕನೆಯ ಸ್ಥಾನಕ್ಕೆ ಬಂದಿದೆ ಎಂದು ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ಹೇಳಿದ ನಂತರದಲ್ಲಿ ವಿರಮಾನಿ ಈ ಮಾತು ಆಡಿದ್ದರು.

‘ಭಾರತದ ಅರ್ಥ ವ್ಯವಸ್ಥೆಯು ವಿಶ್ವದಲ್ಲಿ ನಾಲ್ಕನೆಯ ಅತಿದೊಡ್ಡದು...’ ಎಂದು ಶಮಿಕಾ ರವಿ ಅವರು ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.