ADVERTISEMENT

‘ಹಿಂದೂ ಬೆಳವಣಿಗೆ ದರ’ದ ಸನಿಹಕ್ಕೆ ಭಾರತ: ರಘುರಾಂ ರಾಜನ್

ಪಿಟಿಐ
Published 5 ಮಾರ್ಚ್ 2023, 19:30 IST
Last Updated 5 ಮಾರ್ಚ್ 2023, 19:30 IST
ರಘುರಾಂ ರಾಜನ್
ರಘುರಾಂ ರಾಜನ್   

ನವದೆಹಲಿ: ಖಾಸಗಿ ವಲಯದ ಹೂಡಿಕೆ ಕಡಿಮೆ ಆಗಿರುವುದು, ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗಿರುವುದು ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಯು ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಆರ್ಥಿಕ ಬೆಳವಣಿಗೆ ದರವು ‘ಹಿಂದೂ ಬೆಳವಣಿಗೆ ದರ’ವನ್ನು ಸಮೀಪಿಸಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.

ತ್ರೈಮಾಸಿಕ ಜಿಡಿಪಿ ಬೆಳವಣಿಗೆಯು ತಗ್ಗುತ್ತಿರುವುದು ಕಳವಳಕಾರಿ ಎಂದು ರಾಜನ್ ಹೇಳಿದ್ದಾರೆ. 1950ರ ದಶಕದಿಂದ 1980ರ ದಶಕದವರೆಗೆ ದೇಶದಲ್ಲಿದ್ದ ಕಡಿಮೆ ಪ್ರಮಾಣದ ಆರ್ಥಿಕ ಬೆಳವಣಿಗೆ ದರವನ್ನು ‘ಹಿಂದೂ ಬೆಳವಣಿಗೆ ದರ’ ಎಂದು ಕರೆಯಲಾಗುತ್ತದೆ. ಈ ‍ಪದಗಳನ್ನು ಅರ್ಥಶಾಸ್ತ್ರಜ್ಞ ರಾಜ್ ಕೃಷ್ಣ ಅವರು 1978ರಲ್ಲಿ ಮೊದಲು ಬಳಸಿದ್ದರು.

‘ಖಾಸಗಿ ವಲಯವು ಹೂಡಿಕೆಗೆ ಮನಸ್ಸು ಮಾಡುತ್ತಿಲ್ಲ. ಆರ್‌ಬಿಐ ಬಡ್ಡಿ ದರವನ್ನು ಇನ್ನೂ ಹೆಚ್ಚಿಸುತ್ತಿದೆ. ಈ ವರ್ಷದಲ್ಲಿ ಜಾಗತಿಕ ಬೆಳವಣಿಗೆಯು ನಿಧಾನಗತಿಗೆ ತಿರುಗಲಿದೆ. ಹೀಗಾಗಿ ನಮ್ಮಲ್ಲಿ ಹೆಚ್ಚಿನ ಬೆಳವಣಿಗೆ ಎಲ್ಲಿಂದ ಆಗಲಿದೆ ಎಂಬುದು ನನಗೆ ಗೊತ್ತಿಲ್ಲ’ ಎಂದು ರಾಜನ್ ಅವರು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.