ADVERTISEMENT

7 ಲಕ್ಷ ಉದ್ಯೋಗ ನಿರೀಕ್ಷೆ: ಇ–ಕಾಮರ್ಸ್‌, ಐಟಿ ಕಂಪನಿಗಳಲ್ಲಿ ಹೆಚ್ಚು ಅವಕಾಶ

ಪಿಟಿಐ
Published 1 ಜನವರಿ 2020, 20:00 IST
Last Updated 1 ಜನವರಿ 2020, 20:00 IST
   
""

ನವದೆಹಲಿ: ಖಾಸಗಿ ವಲಯದ ಕಂಪನಿಗಳು ಈ ವರ್ಷದಲ್ಲಿ ಒಟ್ಟಾರೆ 7 ಲಕ್ಷದಷ್ಟು ಉದ್ಯೋಗಾವಕಾಶ ಸೃಷ್ಟಿಸಲಿವೆ. ಒಟ್ಟಾರೆ ವೇತನದಲ್ಲಿನ ಹೆಚ್ಚಳವು ಶೇ 8ರಷ್ಟಿರಲಿದೆ ಎಂದು ವರದಿ ತಿಳಿಸಿದೆ.

ಖಾಸಗಿ ವಲಯದ ಬಹುತೇಕ ಎಲ್ಲಾ ಕಂಪನಿಗಳು ಹೊಸ ನೇಮಕಾತಿಯ ಬಗ್ಗೆ ಹೆಚ್ಚಿನ ಉತ್ಸಾಹ ತೋರಿಸುತ್ತಿವೆ ಎಂದುಮೈಹೈರಿಂಗ್‌ಕ್ಲಬ್‌ ಡಾಟ್‌ಕಾಂ ಮತ್ತು ಸರ್ಕಾರಿ ನೌಕರಿ ಡಾಟ್‌ ಇನ್ಫೊ ಕಂಪನಿಗಳು ನಡೆಸಿರುವ ಎಂಪ್ಲಾಯ್‌ಮೆಂಟ್‌ ಟ್ರೆಂಡ್‌ ಸರ್ವೆ (ಎಂಎಸ್‌ಇಟಿಎಸ್‌) 2020ರಲ್ಲಿ ವಿವರಿಸಲಾಗಿದೆ.

ಬೆಂಗಳೂರು, ಮುಂಬೈ, ದೆಹಲಿ ಮತ್ತು ದೆಹಲಿ ರಾಜಧಾನಿ ಪ್ರದೇಶ, ಚೆನ್ನೈ, ಕೋಲ್ಕತ್ತ, ಹೈದರಾಬಾದ್‌, ಅಹಮದಾಬಾದ್‌ ಮತ್ತು ಪುಣೆಗಳಲ್ಲಿ 5,14,900 ಉದ್ಯೋಗ ಸೃಷ್ಟಿಯಾಗಲಿದ್ದು, ಇನ್ನುಳಿದಂತೆ ಎರಡು ಮತ್ತು ಮೂರನೇ ದರ್ಜೆಯ ನಗರಗಳಲ್ಲಿ ಇರಲಿದೆ.ವೆಚ್ಚ ನಿಯಂತ್ರಿಸುವ ಉದ್ದೇಶದಿಂದ ಕಂಪನಿಗಳು ಎರಡು ಮತ್ತು ಮೂರನೇ ಶ್ರೇಣಿಯ ನಗರಗಳತ್ತ ಮುಖಮಾಡುತ್ತಿವೆ. ಇದರಿಂದಾಗಿ ಈ ನಗರಗಳೇ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಹೆಚ್ಚಿನ ಸಾಮರ್ಥ್ಯ ಹೊಂದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.