ADVERTISEMENT

ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 31 ಪೈಸೆ ಕುಸಿತ

ಪಿಟಿಐ
Published 20 ಫೆಬ್ರುವರಿ 2026, 11:19 IST
Last Updated 20 ಫೆಬ್ರುವರಿ 2026, 11:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

Credit: iStock Photo

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 31 ಪೈಸೆಯಷ್ಟು ಕುಸಿದಿದೆ. ವಹಿವಾಟಿನ ಅಂತ್ಯದ ವೇಳೆಗೆ ರೂಪಾಯಿ ಮೌಲ್ಯವು ₹90.99 ಆಗಿದೆ.

ADVERTISEMENT

ಅಮೆರಿಕ ಮತ್ತು ಇರಾನ್ ಉದ್ವಿಗ್ನತೆಯಿಂದಾಗಿ ಡಾಲರ್‌ಗಳ ಬಲವರ್ಧನೆ ಮತ್ತು ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತ ಉಂಟಾಗಿದೆ. ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತಾದ ಮಾತುಕತೆ ವಿಫಲವಾದರೆ ಎರಡೂ ದೇಶಗಳು ಯುದ್ಧಕ್ಕೆ ಸಿದ್ಧ ಎನ್ನುತ್ತಿವೆ. ಈ ಅನಿಶ್ಚಿತತೆ ಕಾರಣದಿಂದ ಭಾರತದ ರೂಪಾಯಿ ಮೌಲ್ಯ ಕುಸಿದಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಶುಕ್ರವಾರ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ₹90.94ರಂತೆ ವಹಿವಾಟು ಆರಂಭಿಸಿತ್ತು. ಒಂದು ಹಂತದಲ್ಲಿ ₹91.04 ಕನಿಷ್ಠ ಮಟ್ಟಕ್ಕೂ ತಲುಪಿತ್ತು. ಬಳಿಕ ತುಸು ಚೇತರಿಕೆ ಕಂಡು ವಹಿವಾಟಿನ ಅಂತ್ಯಕ್ಕೆ ₹90.99ಕ್ಕೆ ತಲುಪಿದೆ.

ಬುಧವಾರ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 4 ಪೈಸೆ ಏರಿಕೆಯಾಗಿ ₹90.68ಕ್ಕೆ ತಲುಪಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯ ಕಾರಣ ಗುರುವಾರ ಕರೆನ್ಸಿ ವಿನಿಮಯ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದವು.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.50ರಷ್ಟು ಇಳಿಕೆ ಆಗಿದೆ. ಪ್ರತೀ ಬ್ಯಾರೆಲ್ ದರವು 71.50 ಡಾಲರ್ ಆಗಿದೆ.

ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 316 ಅಂಶ ಹೆಚ್ಚಳವಾಗಿ, 82,814ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 116 ಅಂಶ ಏರಿಕೆಯಾಗಿ, 25,571ಕ್ಕೆ ಕೊನೆಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.