ADVERTISEMENT

ಡಿಜಿಟಲ್‌ ಪಾವತಿ | 13,384 ಪ್ರಕರಣ; ₹107 ಕೋಟಿ ವಂಚನೆ

ಪಿಟಿಐ
Published 10 ಮಾರ್ಚ್ 2025, 15:15 IST
Last Updated 10 ಮಾರ್ಚ್ 2025, 15:15 IST
<div class="paragraphs"><p>ಡಿಜಿಟಲ್‌ ಪಾವತಿ  </p></div>

ಡಿಜಿಟಲ್‌ ಪಾವತಿ

   

ನವದೆಹಲಿ: ಡಿಜಿಟಲ್‌ ಪಾವತಿ (ಇಂಟರ್‌ನೆಟ್‌ ಬ್ಯಾಂಕಿಂಗ್‌, ಕಾರ್ಡ್‌ ಮೂಲಕ ನಡೆದ ಪಾವತಿ) ಮೂಲಕ ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ 13,384 ವಂಚನೆ ಪ್ರಕರಣಗಳು ನಡೆದಿವೆ. ಜನರು ₹107 ಕೋಟಿ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

2023–24ರ ಪೂರ್ಣ ಆರ್ಥಿಕ ವರ್ಷದಲ್ಲಿ 29,082 ವಂಚನೆ ಪ್ರಕರಣ ನಡೆದಿದ್ದವು. ಇದರ ಮೊತ್ತ ₹177 ಕೋಟಿಯಾಗಿದೆ ಎಂದು ತಿಳಿಸಿದೆ.

ADVERTISEMENT

ಡಿಜಿಟಲ್‌ ಪಾವತಿ ವಹಿವಾಟು ಹೆಚ್ಚಳದಿಂದ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ಅಪರಾಧಗಳ ವಿರುದ್ಧ ಜಾಗೃತಿ ಮೂಡಿಸಲು ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಲೋಕಸಭೆಗೆ ಕೇಂದ್ರ ಸಚಿವ ಪಂಕಜ್‌ ಚೌಧರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.