ADVERTISEMENT

Iran-Israel War: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

ಕಚ್ಚಾ ತೈಲದಲ್ಲಿ ರಷ್ಯಾ ಪಾಲು ಶೇ 35

ರಾಯಿಟರ್ಸ್
Published 22 ಜೂನ್ 2025, 11:38 IST
Last Updated 22 ಜೂನ್ 2025, 11:38 IST
<div class="paragraphs"><p>ಕಚ್ಚಾ ತೈಲ ಪೈಪ್‌ಲೈನ್‌</p></div>

ಕಚ್ಚಾ ತೈಲ ಪೈಪ್‌ಲೈನ್‌

   

ರಾಯಿಟರ್ಸ್ ಚಿತ್ರ

ನವದೆಹಲಿ: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ತೀವ್ರಗೊಂಡಿ ರುವ ಸಂದರ್ಭದಲ್ಲಿ, ರಷ್ಯಾ ಮತ್ತು ಅಮೆರಿಕದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣವನ್ನು ಭಾರತವು  ಜೂನ್‌ ತಿಂಗಳಲ್ಲಿ ಹೆಚ್ಚಿಸಿದೆ.

ADVERTISEMENT

ಭಾರತಕ್ಕೆ ಕಚ್ಚಾ ತೈಲ ಪೂರೈಕೆಯಲ್ಲಿ ರಷ್ಯಾ ಈಗ ಶೇಕಡ 35ರಷ್ಟು ಪಾಲು ಹೊಂದಿದೆ. 

ಜೂನ್‌ 1ರಿಂದ 19ರವರೆಗೆ ರಷ್ಯಾದಿಂದ ಪ್ರತಿ ದಿನ ಅಂದಾಜು 21 ಲಕ್ಷದಿಂದ 22 ಲಕ್ಷ ಬ್ಯಾರೆಲ್‌ನಷ್ಟು ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಂಡಿದೆ. ಇದು ಕಳೆದ ಎರಡೂವರೆ ವರ್ಷಗಳ ಅತಿ ಹೆಚ್ಚಿನ ಪ್ರಮಾಣ ಎಂದು ಜಾಗತಿಕ ವ್ಯಾಪಾರ ವಿಶ್ಲೇಷಕ ಸಂಸ್ಥೆ ಕೆಪ್ಲೆರ್‌ ಭಾನುವಾರ ತಿಳಿಸಿದೆ.

ಮೇ ತಿಂಗಳಲ್ಲಿ ಭಾರತವು ರಷ್ಯಾದಿಂದ ಪ್ರತಿದಿನ 19.6 ಲಕ್ಷ ಬ್ಯಾರೆಲ್‌ನಷ್ಟು ತೈಲ ಆಮದು ಮಾಡಿಕೊಳ್ಳುತ್ತಿತ್ತು. ಅಮೆರಿಕದಿಂದ ಮೇ ತಿಂಗಳಲ್ಲಿ 2.80 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಪ್ರತಿ ದಿನ ಖರೀದಿ ಮಾಡುತ್ತಿತ್ತು. ಜೂನ್‌ ತಿಂಗಳಲ್ಲಿ ಈ ಪ್ರಮಾಣ 4.39 ಲಕ್ಷ ಬ್ಯಾರೆಲ್‌ಗೆ ಏರಿಕೆಯಾಗಿದೆ ಎಂದು ಕೆಪ್ಲರ್ ತಿಳಿಸಿದೆ.

ಪಶ್ಚಿಮ ಏಷ್ಯಾದ ದೇಶಗಳಾದ ಇರಾಕ್‌, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಜೂನ್‌ 19ರವರೆಗೆ ಅಂದಾಜು 19 ಲಕ್ಷ ಬ್ಯಾರೆಲ್‌ನಷ್ಟು ತೈಲವನ್ನು ಭಾರತ ಆಮದು ಮಾಡಿಕೊಂಡಿದೆ. ಜೂನ್‌ ಅಂತ್ಯದ ವೇಳೆಗೆ ಇದು 20 ಲಕ್ಷ ಬ್ಯಾರೆಲ್‌ಗೆ ತಲುಪುವ ನಿರೀಕ್ಷೆಯಿದೆ. ಮೇ ತಿಂಗಳಿಗೆ ಹೋಲಿಸಿದರೆ ಇಲ್ಲಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣ 1 ಲಕ್ಷದಿಂದ 1.5 ಲಕ್ಷ ಬ್ಯಾರೆಲ್‌ನಷ್ಟು ಕಡಿಮೆಯಾಗಿದೆ. ಆದರೆ, ರಷ್ಯಾದಿಂದ ಆಮದು ಮಾಡಿಕೊಳ್ಳುವುದು ಇದಕ್ಕಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದೆ.

ಭಾರತವು ಜಗತ್ತಿನಲ್ಲಿ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆ ರಾಷ್ಟ್ರವಾಗಿದೆ.

ಹೋರ್ಮುಜ್‌ ಜಲಸಂಧಿ ಮುಚ್ಚುವುದಾಗಿ ಇರಾನ್‌ ಬೆದರಿಕೆ

ಇರಾನ್‌, ಇರಾಕ್‌, ಒಮನ್‌, ಕುವೈತ್‌, ಕತಾರ್‌, ಯುಎಇಗೆ ಹೊಂದಿಕೊಂಡಿರುವ ಹೋರ್ಮುಜ್‌ ಜಲಸಂಧಿ ತೈಲ ರಫ್ತಿನ ಪ್ರಮುಖ ಮಾರ್ಗವಾಗಿದೆ. ಕತಾರ್‌ನಿಂದ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸಾಗಣೆ ಆಗುವುದೂ ಇಲ್ಲಿಯೇ.

ಆದರೆ, ಇಸ್ರೇಲ್‌ ಜೊತೆಗಿನ ಸಂಘರ್ಷ ಉಲ್ಬಣಿಸುತ್ತಿದ್ದಂತೆ ಈ ಜಲಸಂಧಿಯನ್ನು ಬಂದ್‌ ಮಾಡುವುದಾಗಿ ಇರಾನ್‌ ಬೆದರಿಕೆ ಹಾಕಿದೆ. ವಿಶ್ವದ ಐದನೇ ಒಂದರಷ್ಟು ತೈಲ ಈ ಮಾರ್ಗವಾಗಿಯೇ ಸರಬರಾಜಾಗುತ್ತದೆ. ಭಾರತಕ್ಕೆ ಆಮದಾಗುವ ಕಚ್ಚಾತೈಲದಲ್ಲಿ ಶೇ 40ರಷ್ಟು ಹಾಗೂ ಅರ್ಧದಷ್ಟು ಅನಿಲ ಇಂಧನ, ಕಿರಿದಾದ ಈ ಮಾರ್ಗದ ಮೂಲಕವೇ ಬರುತ್ತದೆ.

ಕೆಪ್ಲರ್‌ ಪ್ರಕಾರ, ಇರಾನ್ ಸೇನಾ ನೆಲೆಗಳು ಹಾಗೂ ಪರಮಾಣು ಮೂಲಸೌಕರ್ಯಗಳ ಮೇಲೆ ಇಸ್ರೇಲ್‌ ನಡೆಸಿದ ದಾಳಿಗಳ ಬಳಿಕ ಹೋರ್ಮುಜ್‌ ಮುಚ್ಚುವಿಕೆ ಬಗ್ಗೆ ಕಳವಳ ಹೆಚ್ಚಾಗಿದೆ. ಇರಾನ್ ಮೂಲಭೂತವಾದಿಗಳು ಜಲಸಂಧಿ ಬಂದ್‌ ಬೆದರಿಕೆಯನ್ನು ತೀವ್ರಗೊಳಿಸಿದ್ದು, ಕಚ್ಚಾ ತೈಲ ದರವು ಪ್ರತಿ ಬ್ಯಾರಲ್‌ಗೆ ₹ 34,633 (400 ಡಾಲರ್‌) ತಲುಪುವ ಸಾಧ್ಯತೆ ಇದೆ ಅಲ್ಲಿನ (ಇರಾನ್‌) ಮಾಧ್ಯಮಗಳು ಎಚ್ಚರಿಸಿವೆ.

ಆದಾಗ್ಯೂ, ಇರಾನ್‌ಗೆ ಬೇರೆ ರಾಷ್ಟ್ರಗಳಿಂದ ಪ್ರಬಲ ಬೆಂಬಲವಿಲ್ಲದ ಕಾರಣ, ಜಲಮಾರ್ಗ ಸಂಪೂರ್ಣ ಮುಚ್ಚುವ ಸಂಭವನೀಯತೆ ಕಡಿಮೆ ಎಂದು ಕೆಪ್ಲರ್‌ ವಿಶ್ಲೇಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.