ADVERTISEMENT

ಐಟಿಸಿ ಘಟಕಕ್ಕೆ ಶ್ರೇಷ್ಠತಾ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 14:08 IST
Last Updated 9 ಡಿಸೆಂಬರ್ 2022, 14:08 IST

ಬೆಂಗಳೂರು: ಐಟಿಸಿ ಲಿಮಿಟೆಡ್ ಕಂಪನಿಯು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಹೊಂದಿರುವ ಆಹಾರ ತಯಾರಿಕಾ ಘಟಕವು ‘ಎಡಬ್ಲ್ಯುಎಸ್ ಪ್ಲಾಟಿನಂ–ಲೆವೆಲ್‌’ ಪ್ರಮಾಣಪತ್ರ ಪಡೆದ ಏಷ್ಯಾದ ಮೊದಲ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನೀರಿನ ನಿರ್ವಹಣೆಯಲ್ಲಿ ಇದು ವಿಶ್ವದಲ್ಲಿ ಶ್ರೇಷ್ಠ ಮಾನ್ಯತೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ. ‘ಯಿಪ್ಪಿ!’ ಬ್ರ್ಯಾಂಡ್‌ನ ನೂಡಲ್‌ ಸಿದ್ಧಪಡಿಸುವ ಈ ಘಟಕವು ಏಕೀಕೃತ ಜಲಾನಯನ ಅಭಿವೃದ್ಧಿ ಯೋಜನೆಯನ್ನು ಕೈಗೊಂಡಿದೆ.

ಐಟಿಸಿ ಕಂಪನಿ ಕೈಗೆತ್ತಿಕೊಂಡಿರುವ ಸುಸ್ಥಿರ ಬೆಳವಣಿಗೆ ಯೋಜನೆಗೆ ಇದು ಅನುಗುಣವಾಗಿದೆ. ಕಂಪನಿಯು 2030ರೊಳಗೆ ತಾನು ಬಳಸುವ ನೀರಿಗಿಂತ ಐದು ಪಟ್ಟು ಹೆಚ್ಚು ಮಳೆನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.