ADVERTISEMENT

ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಎಲ್‌ಐಸಿ ಷೇರಿನ ಪಾಲು ಹೆಚ್ಚಳ

ಪಿಟಿಐ
Published 21 ಏಪ್ರಿಲ್ 2025, 13:42 IST
Last Updated 21 ಏಪ್ರಿಲ್ 2025, 13:42 IST
ಎಲ್‌ಐಸಿ
ಎಲ್‌ಐಸಿ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾದಲ್ಲಿನ ತನ್ನ ಷೇರಿನ ಪಾಲು ಶೇ 7.05ಕ್ಕೆ ಹೆಚ್ಚಳವಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತಿಳಿಸಿದೆ.

ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ 10.45 ಕೋಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಿಂದ ಷೇರಿನ ಪಾಲು ಶೇ 5.03ರಿಂದ ಶೇ 7.05ಕ್ಕೆ ಏರಿದೆ ಎಂದು ನಿಗಮವು ಸೋಮವಾರ ಷೇರುಪೇಟೆಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT