ADVERTISEMENT

ಆನ್‌ಲೈನ್ ಗೇಮ್ ಬೇಡಿಕೆ ಹೆಚ್ಚಿಸಿದ ಲಾಕ್‌ಡೌನ್

ವಿಶ್ವನಾಥ ಎಸ್.
Published 11 ಏಪ್ರಿಲ್ 2020, 1:51 IST
Last Updated 11 ಏಪ್ರಿಲ್ 2020, 1:51 IST
   

ಬೆಂಗಳೂರು: ಕೊರೊನಾದಿಂದಾಗಿ ಜನರು ಮನೆಯಲ್ಲಿಯೇ ಲಾಕ್‌ಡೌನ್ ಆಗಿರುವುದರಿಂದ ಆನ್‌ಲೈನ್ ಗೇಮ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳು ಸಿಗುತ್ತಿರುವುದರಿಂದ ಗೇಮ್ ಆಡುವವರ ಸಂಖ್ಯೆ ವೃದ್ಧಿಸುತ್ತಲೇ ಇದ್ದು, ಈ ವರ್ಷ ಉದ್ಯಮವು ಉತ್ತಮ ಬೆಳವಣಿಗೆ ಕಾಣುವ ವಿಶ್ವಾಸದಲ್ಲಿದೆ.

‘ಮೈಂಡ್ ರಿಲ್ಯಾಕ್ಸ್ ಆಗಬೇಕು ಎಂದು ಸ್ಮಾರ್ಟ್‌ಫೋನ್‌ನಲ್ಲಿ ಗೇಮ್ ಆಡುತ್ತಿದ್ದರು. ಈಗಂತೂ ಮನೆಯಿಂ ದಲೇ ಕೆಲಸ ಮಾಡುವವರು, ಕೆಲಸವೇ ಇಲ್ಲದವರು ಎಂದಿಗಿಂತಲೂ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದು, ಆನ್‌ಲೈನ್ ಗೇಮಿಂಗ್ ಉದ್ದಿಮೆಯ ಬೆಳವಣಿಗೆಗೆ ಕಾರಣವಾಗುತ್ತಿದೆ’ ಎಂದು ಆನ್‌ಲೈನ್ ರಮ್ಮಿ ಗೇಮಿಂಗ್ ಪ್ಲಾಟ್ ಫಾರ್ಮ್ ಆಗಿ ರುವ ‘ಅಡ್ಡ52ರಮ್ಮಿಡಾಟ್‌ಕಾಂ’ನ (adda52rummy.com) ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಆಶಿಷ್ ಭಕುನಿ ಅವರು ತಿಳಿಸಿದ್ದಾರೆ.

‘ಆನ್‌ಲೈನ್ ಗೇಮಿಂಗ್ ಉದ್ಯಮದ ಒಟ್ಟಾರೆ ಗಾತ್ರ ₹ 20,000 ಕೋಟಿ ಇದೆ. ಇದರಲ್ಲಿ ರಮ್ಮಿ ಗೇಮ್ ಮಾರುಕಟ್ಟೆ ಪಾಲು ಶೇ 60ರಷ್ಟಿದ್ದು, ರಮ್ಮಿ ಸರ್ಕಲ್, ಜಂಗ್ಲಿ ರಮ್ಮಿ ಮತ್ತು ಅಡ್ಡ52ರಮ್ಮಿ ಮುಖ್ಯವಾಗಿವೆ. ಅಡ್ಡ52ರಮ್ಮಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ.

ADVERTISEMENT

ದಕ್ಷಿಣ ಭಾರತದಲ್ಲಿ ರಮ್ಮಿ ಜನಪ್ರಿಯವಾಗಿದೆ. ಕರ್ನಾಟಕ ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರು, ತಮಿಳು ನಾಡು, ಚೆನ್ನೈ, ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ನಿಂದ ರಮ್ಮಿ ಆಡಲುಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

’ಈ ಮೊದಲು ಜನರು ರಾತ್ರಿ 7ರಿಂದ ಮಧ್ಯರಾತ್ರಿ 1ರವರೆಗೆ ಗೇಮ್ ಆಡುತ್ತಿದ್ದರು. ಆದರೀಗ ಬೆಳಿಗ್ಗೆ ಮತ್ತು ಮಧ್ಯಾಹ್ನವೂ ಗೇಮ್ ಆಡುತ್ತಿ ದ್ದಾರೆ. ಇದನ್ನು ಗಮನಿಸಿ ಹೊಸ ಟೂರ್ನ ಮೆಂಟ್ ಗಳನ್ನು ಆಯೋಜಿಸುತ್ತಿದ್ದೇವೆ.

’ಹೊಸ ಗ್ರಾಹಕರ ಸಂಖ್ಯೆಯಲ್ಲಿ ಶೇ 200ರಷ್ಟು ಏರಿಕೆಯಾಗಿದೆ. ಹೀಗಾಗಿ ಬ್ರ್ಯಾಂಡ್ ಬಗ್ಗೆ ಜಾಗೃತಿ ಮೂಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲ ಬಾರಿಗೆ ಆಟ ಆಡುವವರಿಗೆ ಬೋನಸ್ ಕೋಡ್, ತೆರಿಗೆ ಉಳಿತಾಯ ಹಾಗೂ ಹಾಲಿ ಗ್ರಾಹಕರಿಗೆ ರೆಫರಲ್ ಕೋಡ್ ನೀಡಲಾಗುತ್ತಿದೆ. ಕನಿಷ್ಠ ₹ 500 ಠೇವಣಿ ಇಟ್ಟರೆ ₹ 10,500ರವರೆಗೂ ಕ್ಯಾಷ್ ಬ್ಯಾಕ್ ಸಿಗಲಿದೆ.

‘ದುರ್ಬಳಕೆ, ವಂಚನೆಗೆ ಅವಕಾಶ ಇಲ್ಲ. ಪ್ರತಿ ಗ್ರಾಹಕರೂ ಠೇವಣಿ ಇಟ್ಟಿದ್ದಾರಾ, ಎಷ್ಟು ಹಣ ಹೂಡಿಕೆ ಮಾಡುತ್ತಿದ್ದಾರೆ ಎನ್ನುವ ಪರಿ ಶೀಲನೆ ನಡೆಸಲಾಗುತ್ತಿದೆ. ಮೂರು ತಿಂಗಳಿ ಗೊಮ್ಮೆ ಪ್ರಮಾಣಪತ್ರ ನೀಡುತ್ತೇವೆ. ಅದರಲ್ಲಿ ಬಳಕೆದಾರರ ಠೇವಣಿ, ಗಳಿಕೆ ಮೊತ್ತ, ತೆರಿಗೆ ಕಡಿತದ ಮಾಹಿತಿಗಳು ಇರಲಿವೆ’ ಎಂದು ಆಶಿಷ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.