ADVERTISEMENT

ಬರಲಿದೆ ಮಹೀಂದ್ರ ‘ಎಕ್ಸ್‌ಯುವಿ 300’ನ ಎಲೆಕ್ಟ್ರಿಕ್‌ ಆವೃತ್ತಿ

ಪಿಟಿಐ
Published 30 ಮೇ 2022, 10:38 IST
Last Updated 30 ಮೇ 2022, 10:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು 2023ರ ಮೊದಲ ತ್ರೈಮಾಸಿಕದಲ್ಲಿ ‘ಎಕ್ಸ್‌ಯುವಿ 300’ನ ಎಲೆಕ್ಟ್ರಿಕ್ (ಇ.ವಿ) ಆವೃತ್ತಿಯನ್ನು ಬಿಡುಗಡೆ ಮಾಡುವ ಆಲೋಚನೆ ಹೊಂದಿದೆ.

ಈ ಕುರಿತು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್‌ ಜೆಜುರಿಕರ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ್ದಾರೆ.

ವಿದ್ಯುತ್‌ ಚಾಲಿತ ವಾಹನ ವಹಿವಾಟಿನ ಕುರಿತ ಯೋಜನೆ ‘ಬಾರ್ನ್‌ ಎಲೆಕ್ಟ್ರಿಕ್‌ ವಿಷನ್‌’ಅನ್ನು ಆಗಸ್ಟ್‌ 15ರಂದು ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ.

ADVERTISEMENT

ಮಾಡ್ಯುಲರ್‌ ಎಲೆಕ್ಟ್ರಿಕ್‌ ಡ್ರೈವ್‌ ಮ್ಯಾಟ್ರಿಕ್ಸ್‌ (ಎಂಇಬಿ) ಬಿಡಿಭಾಗಗಳನ್ನು ತನ್ನ ಎಲೆಕ್ಟ್ರಿಕ್‌ ಕಾರುಗಳಲ್ಲಿ ಬಳಸುವ ಸಲುವಾಗಿ ಕಂಪನಿಯು ಈಚೆಗಷ್ಟೇ ಫೋಕ್ಸ್‌ವ್ಯಾಗನ್‌ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ಎಕ್ಸ್‌ಯುವಿ 300ನ ಎಲೆಕ್ಟ್ರಿಕ್‌ ಆವೃತ್ತಿ ಎಂದು ಕರೆದರೂ ಇದು 4.2 ಮೀಟರ್‌ ಉದ್ದ ಇರಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.