ADVERTISEMENT

ಮಾರುತಿ, ಮಹೀಂದ್ರಾ ಮಾರಾಟ ಹೆಚ್ಚಳ

ಪಿಟಿಐ
Published 1 ಜನವರಿ 2020, 20:00 IST
Last Updated 1 ಜನವರಿ 2020, 20:00 IST
   
""

ನವದೆಹಲಿ: ದೇಶದ ವಾಹನ ಉದ್ಯಮವು ಡಿಸೆಂಬರ್‌ನಲ್ಲಿ ಮಿಶ್ರ ಫಲ ಅನುಭವಿಸಿದೆ.

ಮಾರುತಿ ಸುಜುಕಿ, ಮಹೀಂದ್ರಾ, ನಿಸಾನ್‌ ಕಂಪನಿಗಳ ಮಾರಾಟದಲ್ಲಿ ಏರಿಕೆಯಾಗಿದ್ದರೆ, ಟಾಟಾ ಮೋಟರ್ಸ್‌, ಹುಂಡೈ ಮತ್ತು ಟೊಯೋಟ ಕಂಪನಿಗಳ ಮಾರಾಟದಲ್ಲಿ ಇಳಿಕೆಯಾಗಿದೆ.

ಮಾರುತಿ ಸುಜುಕಿ ಕಂಪನಿಯ ಒಟ್ಟಾರೆ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಕಾಂಪ್ಯಾಕ್ಟ್‌ ವಿಭಾಗದ ಬೆಳವಣಿಗೆ ಶೇ 27.9ರಷ್ಟಿದ್ದರೆ, ಯುಟಿಲಿಟಿ ವಾಹನಗಳಲ್ಲಿ ಶೇ 17.7ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ, ಸಣ್ಣ ಗಾತ್ರದ ಕಾರುಗಳ ಮಾರಾಟ ಶೇ 13.6ರಷ್ಟು ಇಳಿಕೆಯಾಗಿದೆ.

ADVERTISEMENT

‘ಡಿಸೆಂಬರ್‌ನಲ್ಲಿ ಸಗಟು ಮಾರಾಟಕ್ಕಿಂತಲೂ ಚಿಲ್ಲರೆ ಮಾರಾಟವು ಶೇ 13ರಷ್ಟು ಗರಿಷ್ಠ ಮಟ್ಟದಲ್ಲಿತ್ತು. ಬಿಎಸ್‌6 ಮಾನದಂಡದ ವಾಹನಗಳ ತಯಾರಿಕೆ ಮತ್ತು ವಿತರಣೆಗೆ ಗಮನ ನೀಡಲಾಗಿದೆ’ ಎಂದು ಟಾಟಾ ಮೋಟರ್ಸ್‌ನ ವಾಣಿಜ್ಯ ವಾಹನಗಳ ವಿಭಾಗದ ಅಧ್ಯಕ್ಷ ಗಿರೀಶ್‌ ವಾಘ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.