ADVERTISEMENT

ಹಬ್ಬದ ಬೇಡಿಕೆ: ಪ್ರಯಾಣಿಕ ವಾಹನ ಮಾರಾಟ ಏರಿಕೆ

ಪಿಟಿಐ
Published 1 ನವೆಂಬರ್ 2023, 15:42 IST
Last Updated 1 ನವೆಂಬರ್ 2023, 15:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹಬ್ಬದ ಬೇಡಿಕೆಯಿಂದಾಗಿ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಅಕ್ಟೋಬರ್‌ನಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. 2023ರ ಅಕ್ಟೋಬರ್‌ನಲ್ಲಿ 3.91 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟ ಆಗಿವೆ. 2022ರ ಅಕ್ಟೋಬರ್‌ಗೆ ಹೋಲಿಸಿದರೆ (3.36 ಲಕ್ಷ) ಮಾರಾಟದಲ್ಲಿ ಶೇ 16ರಷ್ಟು ಹೆಚ್ಚಳ ಕಂಡುಬಂದಿದೆ.

ಮಾರುತಿ ಸುಜುಕಿ ಮತ್ತು ಮಹೀಂದ್ರ ಕಂಪನಿಗಳು ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡಿರುವುದಾಗಿ ಹೇಳಿವೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ದೇಶಿ ವಾಹನ ಮಾರಾಟವು ಶೇ 21ರಷ್ಟು ಹೆಚ್ಚಾಗಿ 1.77 ಲಕ್ಷಕ್ಕೆ ತಲುಪಿದೆ  ಎಂದು ಕಂಪನಿ ತಿಳಿಸಿದೆ. 

ADVERTISEMENT

ಕಂಪನಿಯ ಪ್ರಾಣಿಕ ವಾಹನ ಮಾರಾಟ  1.40 ಲಕ್ಷದಿಂದ 1.68 ಲಕ್ಷಕ್ಕೆ ದಾಖಲೆಯ ಏರಿಕೆ ಆಗಿದೆ. ಈ ಹಿಂದೆ 2020ರ ಅಕ್ಟೋಬರ್‌ನಲ್ಲಿ 1.63 ಲಕ್ಷ ವಾಹನ ಮಾರಾಟ ಆಗಿತ್ತು ಎಂದು ಕಂಪನಿಯು ತಿಳಿಸಿದೆ.

ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಸಗಟು ಮಾರಾಟ ಶೇ 32ರಷ್ಟು ಹೆಚ್ಚಾಗಿ 80,679ಕ್ಕೆ ತಲುಪಿದೆ. 2022ರ ಅಕ್ಟೋಬರ್‌ನಲ್ಲಿ ಕಂಪನಿಯು 61,114 ವಾಹನಗಳನ್ನು ಮಾರಾಟ ಮಾಡಿತ್ತು.

ಹುಂಡೈ ಮೋಟರ್‌ನ ಮಾರಾಟ ಶೇ 15ರಷ್ಟು ಹೆಚ್ಚಾಗಿ 55,128ಕ್ಕೆ ತಲುಪಿದೆ. ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ಮಾರಾಟ ಶೇ 7ರಷ್ಟು ಹೆಚ್ಚಾಗಿದ್ದು, ಒಟ್ಟು 48,337 ವಾಹನಗಳು ಮಾರಾಟ ಆಗಿವೆ. ಟೊಯೋಟ ಕಿರ್ಲೋಸ್ಕರ್ ಮೋಟರ್ಸ್‌ 21,879 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 66ರಷ್ಟು ಹೆಚ್ಚಳ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.