ADVERTISEMENT

ಸುಂಕ ಇಳಿಕೆ ಭಾರತಕ್ಕೆ ಒಳಿತು: ಮೂಡೀಸ್

ಪಿಟಿಐ
Published 3 ಫೆಬ್ರುವರಿ 2026, 16:12 IST
Last Updated 3 ಫೆಬ್ರುವರಿ 2026, 16:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಭಾರತದಿಂದ ಆಮದಾಗುವ ಬಹುತೇಕ ಉತ್ಪನ್ನಗಳಿಗೆ ಸುಂಕವನ್ನು ಕಡಿಮೆ ಮಾಡಲು ಅಮೆರಿಕದ ನಿರ್ಧರಿಸಿರುವುದರಿಂದ ಭಾರತದ ಹವಳಗಳು, ಆಭರಣ, ಜವಳಿ ಮತ್ತು ಉಡುಪು ಉದ್ಯಮಕ್ಕೆ ಅನುಕೂಲ ಆಗಲಿದೆ ಎಂದು ಜಾಗತಿಕ ರೇಟಿಂಗ್ಸ್‌ ಸಂಸ್ಥೆ ಮೂಡೀಸ್ ಹೇಳಿದೆ.

ಮೂಡೀಸ್‌ ಉಲ್ಲೇಖಿಸಿರುವ ವಲಯಗಳಲ್ಲಿ ಕಾರ್ಮಿಕರ ಪಾಲುದಾರಿಕೆ ಹೆಚ್ಚಿನ ಮಟ್ಟದಲ್ಲಿ ಇರುತ್ತದೆ. ಭಾರತದಿಂದ ಆಮದು ಆಗುವ ಉತ್ಪನ್ನಗಳ ಮೇಲಿನ ಪ್ರತಿಸುಂಕ ಶೇ 25ರಷ್ಟು ಇರುವುದನ್ನು ಶೇ 18ಕ್ಕೆ ಇಳಿಕೆ ಮಾಡಲಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಸೋಮವಾರ ಪ್ರಕಟಿಸಿದ್ದಾರೆ.

ADVERTISEMENT

ಟ್ರಂಪ್ ಅವರು ಘೋಷಿಸಿರುವ ಒಪ್ಪಂದವು ಭಾರತದ ಸರಕುಗಳು ಅಮೆರಿಕಕ್ಕೆ ರಫ್ತಾಗುವುದನ್ನು ಹೆಚ್ಚು ಮಾಡಲಿದೆ ಎಂದು ಮೂಡೀಸ್ ಹೇಳಿದೆ. ಭಾರತದ ಸರಕುಗಳ ‍ಪಾಲಿಗೆ ಅಮೆರಿಕವು ಈಗಲೂ ಅತಿದೊಡ್ಡ ಮಾರುಕಟ್ಟೆ. 2025ರ ಮೊದಲ 11 ತಿಂಗಳಲ್ಲಿ ಭಾರತದಿಂದ ರಫ್ತಾದ ಸರಕುಗಳ ಪೈಕಿ ಶೇಕಡ 21ರಷ್ಟು ಅಮೆರಿಕದ ಮಾರುಕಟ್ಟೆ ತಲುಪಿವೆ.

ಔಷಧ ಹಾಗೂ ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ವಲಯವು ಅಮೆರಿಕ ವಿಧಿಸಿದ್ದ ಶೇ 50ರಷ್ಟು ಸುಂಕದ ವ್ಯಾಪ್ತಿಯಿಂದ ಹೊರಗಿದ್ದವು. ಹೀಗಾಗಿ ಈಗಿನ ಸುಂಕ ಇಳಿಕೆ ಕ್ರಮವು ಈ ಎರಡು ವಲಯಗಳ ಮೇಲೆ ಪರಿಣಾಮ ಬೀರದು ಎಂದು ಮೂಡಿಸ್‌ ಹೇಳಿದೆ.

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವುದನ್ನು ಈಚಿನ ದಿನಗಳಲ್ಲಿ ಕಡಿಮೆ ಮಾಡಿದೆಯಾದರೂ, ಅದು ಆ ಖರೀದಿಗಳನ್ನು ಪೂರ್ಣವಾಗಿ ನಿಲ್ಲಿಸಲಿಕ್ಕಿಲ್ಲ ಎಂದು ಕೂಡ ಮೂಡೀಸ್‌ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.