
ನವದೆಹಲಿ: ದಂಡವಿಲ್ಲದೆ ಆದಾಯ ತೆರಿಗೆ ವಿವರ (ಐಟಿಆರ್) ಸಲ್ಲಿಕೆಗೆ ನೀಡಿದ್ದ ಸೆಪ್ಟೆಂಬರ್ 15ರ ಗಡುವನ್ನು ಸೆ.16ವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ‘ಎಕ್ಸ್’ನಲ್ಲಿ ತಿಳಿಸಿದೆ.
ಐ.ಟಿ ವಿವರ ಸಲ್ಲಿಸಲು ಪೋರ್ಟಲ್ ನಲ್ಲಿ ಸಮಸ್ಯೆ ಆಗುತ್ತಿದೆ, ಗಡುವನ್ನು ವಿಸ್ತರಿಸಬೇಕು ಎಂದು ಬಳಕೆದಾರರು ಇಲಾಖೆಯನ್ನು ಒತ್ತಾಯಿಸಿದ್ದರು. ಹೀಗಾಗಿ, ಒಂದು ದಿನದ ಮಟ್ಟಿಗೆ ಗಡುವು ವಿಸ್ತರಿಸಲಾಗಿದೆ.
ಈ ಮೊದಲು ಸೆಪ್ಟೆಂಬರ್ 15ರವರೆಗೆ ದಂಡ ಇಲ್ಲದೆ ಐಟಿಆರ್ ಸಲ್ಲಿಕೆಗೆ ಅವಕಾಶವಿತ್ತು . ಈ ವೇಳೆಗೆ 7 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆಯಾ
ಗಿವೆ. ಕಳೆದ ವರ್ಷದ ಜುಲೈ 31ರ ವೇಳೆಗೆ 7.28 ಕೋಟಿ ಐಟಿಆರ್ ಸಲ್ಲಿಕೆ ಆಗಿದ್ದವು ಎಂದು ಇಲಾಖೆ ತಿಳಿಸಿದೆ.
ಐ.ಟಿ ವಿವರ ಸಲ್ಲಿಕೆಗೆ ನೀಡಿದ್ದ ಗಡುವು ಅಂತಿಮಗೊಳ್ಳುತ್ತಿರುವ ಸಂದರ್ಭದಲ್ಲಿ ಪೋರ್ಟಲ್‌ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಬಳಕೆದಾರರು ಸಾಮಾಜಿಕ ಜಾಲತಾಣಗಳ ಮೂಲಕ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆ, ಪೋರ್ಟಲ್ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.