
ಪಿಟಿಐ
ನವದೆಹಲಿ: ಜಪಾನ್‌ನ ಮಿತ್ಸುಬಿಷಿ ಯುಎಫ್‌ಜೆ ಫೈನಾನ್ಶಿಯಲ್ ಸಮೂಹವು (ಎಂಯುಎಫ್‌ಜಿ) ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನಲ್ಲಿರುವ ಶೇ 20ರಷ್ಟು ಷೇರನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಇದು ಹಣಕಾಸಿನ ಮೌಲ್ಯದಲ್ಲಿ ₹39,618 ಕೋಟಿ ಆಗಿದೆ.
ಈ ಹೂಡಿಕೆಯು ಇದುವರೆಗಿನ ದೇಶದ ಹಣಕಾಸು ವಲಯದಲ್ಲಿ ಅತಿದೊಡ್ಡದಾದ ಗಡಿಯಾಚೆಗಿನ ವಹಿವಾಟಾಗಿದೆ ಎಂದು ಶ್ರೀರಾಮ್ ಫೈನಾನ್ಸ್ ತಿಳಿಸಿದೆ.
ಶ್ರೀರಾಮ್ ಫೈನಾನ್ಸ್‌ನ ಆಡಳಿತ ಮಂಡಳಿಯು ಎಂಯುಎಫ್‌ಜಿ ಬ್ಯಾಂಕ್‌ಗೆ ಶೇ 20ರಷ್ಟು ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ ಎಂದು ತಿಳಿಸಿದೆ.
ಈ ಒಪ್ಪಂದವು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಅತಿದೊಡ್ಡ ಎಫ್‌ಡಿಐ ಹರಿವಿಗೆ ಕಾರಣವಾಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.