ADVERTISEMENT

ನಿಯಮ ‌ಉಲ್ಲಂಘನೆ: ಗೂಗಲ್‌ಗೆ ವಿಧಿಸಿದ್ದ ದಂಡ ಇಳಿಕೆ

ಪಿಟಿಐ
Published 29 ಮಾರ್ಚ್ 2025, 14:09 IST
Last Updated 29 ಮಾರ್ಚ್ 2025, 14:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ಲೇ ಸ್ಟೋರ್‌ ನೀತಿಗೆ ಸಂಬಂಧಿಸಿದ ನಿಯಮಾವಳಿ ಉಲ್ಲಂಘಿಸಿರುವ ಗೂಗಲ್‌ ಕಂಪನಿ ವಿರುದ್ಧ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ಕೈಗೊಂಡಿರುವ ಕ್ರಮವನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ಎತ್ತಿ ಹಿಡಿದಿದೆ. 

ಆದರೆ, ಗೂಗಲ್‌ಗೆ ಸಿಸಿಐ ವಿಧಿಸಿದ್ದ ₹936.44 ಕೋಟಿ ದಂಡ ಪ್ರಮಾಣವನ್ನು ₹216 ಕೋಟಿಗೆ ಇಳಿಕೆ ಮಾಡಿದೆ.

ಗೂಗಲ್‌ ಕಂಪನಿಯು ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಜೊತೆಗೆ, ಕೆಲವು ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಮತ್ತು ತಾಂತ್ರಿಕ ಸದಸ್ಯ ಬರುನ್ ಮಿತ್ರ ಅವರಿದ್ದ ವಿಭಾಗೀಯ ನ್ಯಾಯಪೀಠವು ಹೇಳಿದೆ.

ADVERTISEMENT

ಈಗಾಗಲೇ, ಕಂಪನಿಯು ದಂಡದ ಮೊತ್ತ ಪೈಕಿ ಶೇ 10ರಷ್ಟನ್ನು ಠೇವಣಿ ಇಟ್ಟಿದೆ. ಉಳಿದ ಮೊತ್ತವನ್ನು 30 ದಿನದೊಳಗೆ ನ್ಯಾಯಪೀಠದಲ್ಲಿ ಠೇವಣಿ ಇಡಬೇಕಿದೆ ಎಂದು ಆದೇಶಿಸಿದೆ.

ಪ್ಲೇ ಸ್ಟೋರ್‌ ನೀತಿಗಳ ಉಲ್ಲಂಘನೆಗೆ ಸಂಬಂಧಿಸಿದಂತೆ 2022ರ ಅಕ್ಟೋಬರ್‌ 25ರಂದು ಭಾರತೀಯ ಸ್ಪರ್ಧಾತ್ಮಕ ಆಯೋಗವು, ಗೂಗಲ್‌ಗೆ ದಂಡ ವಿಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.