ADVERTISEMENT

‌ಆ.1ರಿಂದ UPI ವಹಿವಾಟಿನಲ್ಲಿ ಹೊಸ ನಿಯಮ ಜಾರಿ: ಏನದು?

ಡೆಕ್ಕನ್ ಹೆರಾಲ್ಡ್
Published 28 ಜುಲೈ 2025, 7:29 IST
Last Updated 28 ಜುಲೈ 2025, 7:29 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಡಿಜಿಟಲ್‌ ಹಣ ಪಾವತಿ ವ್ಯವಸ್ಥೆ ಯುಪಿಐನ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹಲವು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. 

ಈ ಬದಲಾವಣೆಗಳು ಆಗಸ್ಟ್‌ 1 ರಿಂದ ಬಳಕೆದಾರರಿಗೆ ಅನ್ವಯವಾಗಲಿದೆ. 

ದಿನನಿತ್ಯ ಮಾಡುವ ಸಣ್ಣ ಪ್ರಮಾಣದ ಪಾವತಿಯ ಮೇಲೆ ಯಾವುದೇ ಪರಿಣಾಮ ಬೀರದು ಎಂದಿರುವ ನಿಗಮ, ಕೆಲವು ಮಿತಿಗಳು, ಹಣ ಪಾವತಿಯ ಸಮಯಗಳಲ್ಲಿ ಬದಲಾವಣೆ ತಂದಿದೆ.

ADVERTISEMENT

ಅವುಗಳೆಂದರೆ...

  • ಹೊಸ ನಿಯಮದ ಪ್ರಕಾರ, ಒಂದು ದಿನದಲ್ಲಿ ಬಳಕೆದಾರರು 50 ಬಾರಿ ಮಾತ್ರ ಯುಪಿಐ ಅಪ್ಲಿಕೇಷನ್‌ ಮೂಲಕ ಖಾತೆಯಲ್ಲಿರುವ ಬಾಕಿ ಹಣವನ್ನು ಪರಿಶೀಲಿಸಬಹುದು.

  • ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಬಳಕೆದಾರರು ದಿನಕ್ಕೆ 25 ಬಾರಿ ಮಾತ್ರ ಪಡೆಯಬಹುದು.

  • ನೆಟ್‌ಫ್ಲಿಕ್ಸ್‌, ಸ್ಪಾಟಿಪೈ, ಮ್ಯುಚುವಲ್‌ ಫಂಡ್ಸ್‌ ಹೀಗೆ ಹಲವು ರೀತಿಯ ಪೇಮೆಂಟ್‌ಗಳನ್ನು ಆಟೋ ಮೋಡ್‌ನಲ್ಲಿ ಇಟ್ಟಿರುತ್ತೇವೆ. ಅಂದರೆ ತಿಂಗಳಾಂತ್ಯಕ್ಕೆ ಅಥವಾ ಅವಧಿ ಮುಗಿದ ಮೇಲೆ ಖಾತೆಯಿಂದ ಅದಾಗಿಯೇ ಹಣ ಪಾವತಿಯಾಗುತ್ತದೆ. ಈ ಪ್ರಕ್ರಿಯೆ ಆ.1ರಿಂದ ಕೇವಲ ಹಣ ಪಾವತಿಯ ದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಪಾವತಿಯಾಗಲಿದೆ. ಅಂದರೆ ಬೆಳಿಗ್ಗೆ 10ರ ಒಳಗೆ, ಮಧ್ಯಾಹ್ನ 1–5ರವರೆಗೆ ಹಾಗೂ ರಾತ್ರಿ 9.30ರ ನಂತರ ಪಾವತಿಯಾಗಲಿದೆ. 

  • ಹಣ ಪಾವತಿಸುವಾಗ ಒಂದು ವೇಳೆ ವಹಿವಾಟು ಬಾಕಿಯಾದರೆ, ಬಳಕೆದಾರರಿಗೆ ಅದರ ಸ್ಥಿತಿಯನ್ನು ಮೂರು ಬಾರಿ ಮಾತ್ರ ಪರಿಶೀಲಿಸಲು ಅನುಮತಿಸಲಾಗುತ್ತದೆ, ಪ್ರತಿ ಪ್ರಯತ್ನದ ನಡುವೆ ಕಡ್ಡಾಯವಾಗಿ 90 ಸೆಕೆಂಡುಗಳ ಅಂತರವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.