ನವದೆಹಲಿ: ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಡಿಜಿಟಲ್ ಪಾವತಿ ಆ್ಯಪ್‌ಗಳ ವಹಿವಾಟಿಗೆ ಶೇ 30ರಷ್ಟು ಮಿತಿ ಹೇರುವ ಕಾಲಾವಕಾಶವನ್ನು 2026ರ ಡಿಸೆಂಬರ್ 1ರ ವರೆಗೆ ವಿಸ್ತರಿಸಿದೆ.
ಎನ್‌ಪಿಸಿಐನ ಈ ನಿರ್ಧಾರದಿಂದ ಫೋನ್ ಪೇ ಹಾಗೂ ಗೂಗಲ್ ಪೇಗೆ ವರದಾನವಾಗಿದೆ.
2020ರ ನವೆಂಬರ್‌ನಲ್ಲಿ ಡಿಜಿಟಲ್ ಆ್ಯಪ್‌ಗಳ ವಹಿವಾಟಿಗೆ ಮಿತಿ ಹೇರುವ ಬಗ್ಗೆ ಎನ್‌ಪಿಸಿಐ ಪ್ರಸ್ತಾವ ಸಿದ್ಧಪಡಿಸಿತ್ತು. ಬಳಿಕ ಇದನ್ನು ಜಾರಿಗೊಳಿಸುವ ಅವಧಿಯನ್ನು ಎರಡು ವರ್ಷದವರೆಗೆ ವಿಸ್ತರಿಸಲಾಗಿತ್ತು.
ಯುಪಿಐ ವಹಿವಾಟಿನಲ್ಲಿ ಫೋನ್ ಪೇ ಮತ್ತು ಗೂಗಲ್ ಪೇ ಶೇ 80ರಷ್ಟು ಪಾಲು ಹೊಂದಿವೆ.
ಈ ಥರ್ಡ್ ಪಾರ್ಟಿ ಆ್ಯಪ್‌ಗಳ ಮೂಲಕ ನಡೆಯುವ ವಹಿವಾಟಿನ ಆಧಾರದ ಮೇಲೆ ಶೇ 30ರಷ್ಟು ಮಿತಿಯನ್ನು ನಿರ್ಧರಿಸಲಾಗುತ್ತದೆ. ಮೂರು ತಿಂಗಳ ಅವಧಿಯಲ್ಲಿ ನಡೆದಿರುವ ವಹಿವಾಟು ಆಧರಿಸಿ ಇದನ್ನು ಲೆಕ್ಕ ಹಾಕಲಾಗುತ್ತದೆ ಎಂದು ಎನ್‌ಪಿಸಿಐ ತಿಳಿಸಿದೆ.
ಥರ್ಡ್ ಪಾರ್ಟಿ ಆ್ಯಪ್‌ಗಳು ಯುಪಿಐ ವಹಿವಾಟಿನಲ್ಲಿ ಶೇ 30ರಷ್ಟು ಮಾರುಕಟ್ಟೆ ಪಾಲು ಹೊಂದಿದ ತಕ್ಷಣವೇ ಹೊಸ ಬಳಕೆದಾರರಿಗೆ ಡಿಜಿಟಲ್ ಪಾವತಿಗೆ ಅವಕಾಶ ಸಿಗುವುದಿಲ್ಲ. ಪ್ರಸ್ತುತ ವಾಟ್ಸ್‌ಆ್ಯಪ್ ಪಾವತಿ ಸೇವೆಗೆ ಸಂಬಂಧಿಸಿದಂತೆ ಹೇರಿದ್ದ ಮಿತಿಯನ್ನು ರಾಷ್ಟ್ರೀಯ ಪಾವತಿ ನಿಗಮವು ತೆಗೆದುಹಾಕಿದೆ. ಇನ್ನು ಮುಂದೆ ವಾಟ್ಸ್‌ಆ್ಯಪ್ ಪೇ ಎಲ್ಲಾ ಬಳಕೆದಾರರಿಗೂ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.