ADVERTISEMENT

ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಶೇ.24 ಇಳಿಕೆ

ಪಿಟಿಐ
Published 11 ಅಕ್ಟೋಬರ್ 2019, 9:00 IST
Last Updated 11 ಅಕ್ಟೋಬರ್ 2019, 9:00 IST
ವಾಹನ
ವಾಹನ   

ನವದೆಹಲಿ: ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು ಸೆಪ್ಟೆಂಬರ್ ತಿಂಗಳಲ್ಲಿ ಶೇ. 23.69 ಇಳಿಕೆ ಕಂಡಿದೆ. ಕಳೆದ ವರ್ಷ 2,92,660 ಯುನಿಟ್ ಮಾರಾಟವಾಗಿದ್ದು ಈ ವರ್ಷ ಮಾರಾಟ 2,23,317 ಯುನಿಟ್‌ಗೆ ಇಳಿದಿದೆ.

ಕಳೆದ 11 ತಿಂಗಳಲ್ಲಿ ವಾಹನ ಮಾರಾಟದಲ್ಲಿ ಸತತ ಇಳಿಕೆ ಕಂಡು ಬಂದಿದ್ದು ಚೇತರಿಸುವ ಲಕ್ಷಣಗಳು ಕಾಣುತ್ತಿಲ್ಲ.

2018 ಸೆಪ್ಟೆಂಬರ್ ತಿಂಗಳಲ್ಲಿ 1,97,124 ಯುನಿಟ್ ಕಾರು ಮಾರಾಟವಾಗಿತ್ತು. ಅದೇ ವೇಳೆ ಕಳೆದ ತಿಂಗಳು 1,31,281 ಯುನಿಟ್ ಕಾರು ಮಾರಾಟವಾಗಿದೆ. ಅಂದರೆ ದೇಶೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟ ಶೇ.33.4 ರಷ್ಟು ಕುಸಿತ ಕಂಡಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಎಐಎಂ) ಶುಕ್ರವಾರ ಹೇಳಿದೆ.

ಕಳೆದ ವರ್ಷ ಮೊಟಾರ್ ಸೈಕಲ್ 13,60,415 ಯುನಿಟ್ ಮಾರಾಟವಾಗಿತ್ತು. ಕಳೆದ ತಿಂಗಳು 10,43,624 ಯುನಿಟ್ ಮಾರಾಟವಾಗಿದ್ದು ಶೇ 23.29 ರಷ್ಟು ಕುಸಿತವುಂಟಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟ ಶೇ. 22.09 ರಷ್ಟು ಇಳಿದಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 21,26,445 ಯುನಿಟ್ ಮಾರಾಟವಾಗಿದ್ದು ಈ ವರ್ಷ 16,56,774 ಯುನಿಟ್ ಮಾರಾಟವಾಗಿದೆ.
ವಾಣಿಜ್ಯೋದ್ದೇಶಿತ ವಾಹನಗಳ ಮಾರಾಟದಲ್ಲಿ ಶೇ. 39.06 ಇಳಿಕೆ ಕಂಡುಬಂದಿದೆ. ಕಳೆದ ವರ್ಷ 95,870 ಯುನಿಟ್ ಮಾರಾಟವಾಗಿದ್ದು ಪ್ರಸಕ್ತ ವರ್ಷ 58,419 ಯುನಿಟ್ ಮಾರಾಟವಾಗಿದೆ.

ಎಲ್ಲ ರೀತಿಯ ವಾಹನ ಮಾರಾಟಗಲ್ಲಿ ಶೇ. 22.41 ಕುಸಿತ ಕಂಡು ಬಂದಿದೆ. 2018ರಲ್ಲಿ 25,84,062 ಯುನಿಟ್ ಮಾರಾಟವಾಗಿದ್ದರೆ ಈ ವರ್ಷ 20,04,932 ಯುನಿಟ್ ಮಾರಾಟವಾಗಿದೆ ಎಂದು ಎಸ್‌ಎಐಎಂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.