ಬೆಂಗಳೂರು: ಮೂರು ದಿನಗಳ ವಿರಾಮದ ಬಳಿಕ ಮತ್ತೆ ಶನಿವಾರದೇಶದಾದ್ಯಂತ ಪೆಟ್ರೋಲ್ ಡೀಸೆಲ್ ದರ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 24 ಪೈಸೆ ಹೆಚ್ಚಾಗಿ ₹ 94.22ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ಪ್ರತಿ ಲೀಟರಿಗೆ ₹ 16 ಪೈಸೆ ಹೆಚ್ಚಾಗಿ ₹ 86.37ಕ್ಕೆ ತಲುಪಿದೆ. ಫೆಬ್ರುವರಿ 9ರಿಂದ 27ರವರೆಗಿನ ಅವಧಿಯಲ್ಲಿ 14 ದಿನಗಳಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹ 4.24 ರಷ್ಟು ಮತ್ತು ಡೀಸೆಲ್ ದರ ₹ 4.37ರಷ್ಟು ಏರಿಕೆ ಆಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ 40 ಪೈಸೆ ಮತ್ತು ಡೀಸೆಲ್ ದರ 15 ಪೈಸೆ ಹೆಚ್ಚಾಗಿದ್ದು, ಕ್ರಮವಾಗಿ ಒಂದು ಲೀಟರ್ ಪೆಟ್ರೋಲ್ ₹ 91.17 ಮತ್ತು ಒಂದು ಲೀಟರ್ ಡೀಸೆಲ್ ₹ 81.47ಕ್ಕೆ ತಲುಪಿದೆ. ದೆಹಲಿಯಲ್ಲಿ ಫೆಬ್ರುವರಿ ತಿಂಗಳಿನಲ್ಲಿ ಇದುವರೆಗೆ ಪ್ರತಿ ಲೀಟರಿಗೆ ಪೆಟ್ರೋಲ್ ದರ ₹ 4.89ರಷ್ಟು ಮತ್ತು ಡೀಸೆಲ್ ₹ 4.99ರಷ್ಟು ಏರಿಕೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.