ADVERTISEMENT

ಮತ್ತೆ ಏರುತ್ತಿದೆ ಪೆಟ್ರೋಲ್‌ ದರ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 11:38 IST
Last Updated 18 ಆಗಸ್ಟ್ 2020, 11:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್‌ ದರವನ್ನು ಮತ್ತೆ ಪೈಸೆಗಳ ಲೆಕ್ಕದಲ್ಲಿ ಹೆಚ್ಚಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಮೂರನೇ ದಿನವೂ ಪೆಟ್ರೋಲ್‌ ದರದಲ್ಲಿ ಏರಿಕೆ ಮಾಡಿವೆ.

ಬೆಂಗಳೂರಿನಲ್ಲಿ ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್‌ ಬೆಲೆಯನ್ನು 14 ಪೈಸೆ ಹೆಚ್ಚಿಸಲಾಗಿದೆ. ಇದರಿಂದಾಗಿ, ಮೂರು ದಿನಗಳಲ್ಲಿ ಒಂದು ಲೀಟರಿಗೆ 41 ಪೈಸೆಯಷ್ಟು ಹೆಚ್ಚಾದಂತಾಗಿದೆ. ಮಂಗಳವಾರ ಒಂದು ಲೀಟರ್ ಪೆಟ್ರೋಲ್‌ ₹ 83.52ರಂತೆ ಮಾರಾಟವಾಯಿತು.

ದೆಹಲಿಯಲ್ಲಿ 17 ಪೈಸೆಯಷ್ಟು ಹೆಚ್ಚಾಗಿದ್ದು, ಲೀಟರಿಗೆ ₹ 80.90ರಂತೆ ಮಾರಾಟವಾಯಿತು. ಮುಂಬೈನಲ್ಲಿ 13 ಪೈಸೆಯಷ್ಟು ಹೆಚ್ಚಾಗಿ ₹ 87.58ರಂತೆ ಮಾರಾಟವಾಗಿದೆ. ಜೂನ್‌ 30ರಿಂದ ಆಗಸ್ಟ್‌15ರವರೆಗೆ ಪೆಟ್ರೋಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.