ADVERTISEMENT

ಮೇ1ರಿಂದ ಎಟಿಎಂ ವಹಿವಾಟು ಶುಲ್ಕ ಹೆಚ್ಚಳ

ಪಿಟಿಐ
Published 28 ಮಾರ್ಚ್ 2025, 14:19 IST
Last Updated 28 ಮಾರ್ಚ್ 2025, 14:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕ ಹೆಚ್ಚಿಸಲು ಬ್ಯಾಂಕ್‌ಗಳಿಗೆ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಅನುಮತಿ ನೀಡಿದೆ.

ಹಾಗಾಗಿ, ಮಾಸಿಕ ಉಚಿತ ವಹಿವಾಟು ಮಿತಿ ಮೀರಿದರೆ ಪ್ರತಿ ವಹಿವಾಟಿಗೆ ಗ್ರಾಹಕರು ₹2 ಹೆಚ್ಚುವರಿ ಶುಲ್ಕ ಭರಿಸಬೇಕಿದೆ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್‌ನ ಎಟಿಎಂಗಳಿಂದ ಪ್ರತಿ ತಿಂಗಳು ಉಚಿತವಾಗಿ 5 ಬಾರಿ ವಹಿವಾಟು (ಹಣಕಾಸು– ಹಣಕಾಸುಯೇತರ) ನಡೆಸಬಹುದಾಗಿದೆ. ಇತರೆ ಬ್ಯಾಂಕ್‌ನ ಎಟಿಎಂಗಳಲ್ಲಾದರೆ ಮಹಾನಗರ ವ್ಯಾಪ್ತಿಯಲ್ಲಿ ಮೂರು ಮತ್ತು ಇತರೆ ಪ್ರದೇಶಗಳಲ್ಲಿ 5 ವಹಿವಾಟುಗಳನ್ನು ಉಚಿತವಾಗಿ ನಡೆಸಬಹುದಾಗಿದೆ.

ADVERTISEMENT

ಪ್ರಸ್ತುತ ಪ್ರತಿ ವಹಿವಾಟಿಗೆ ₹21 ಶುಲ್ಕ ವಿಧಿಸಲಾಗುತ್ತಿದ್ದು, ಇದನ್ನು ಗರಿಷ್ಠ ₹23ಕ್ಕೆ ಹೆಚ್ಚಳವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.