ADVERTISEMENT

ಲಕ್ಷ್ಮಿ ವಿಲಾಸ್ ಬ್ಯಾಂಕ್‌ ವಿರುದ್ಧ ಆರ್‌ಬಿಐ ಕ್ರಮ

ಪಿಟಿಐ
Published 28 ಸೆಪ್ಟೆಂಬರ್ 2019, 19:45 IST
Last Updated 28 ಸೆಪ್ಟೆಂಬರ್ 2019, 19:45 IST
   

ನವದೆಹಲಿ:ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್‌ಗೆ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧ (ಪಿಸಿಎ) ವಿಧಿಸಿದೆ.

ವಸೂಲಾಗದ ಸಾಲದ ಗರಿಷ್ಠ ಮಟ್ಟದಲ್ಲಿದೆ.ಆರ್ಥಿಕ ನಷ್ಟ ಬಗೆಹರಿಸಲು ಅಗತ್ಯವಾದ ಬಂಡವಾಳ ನಿರ್ವಹಣೆ ಮಾಡದೇ ಇರುವುದು ಮತ್ತು ಸತತ ಎರಡು ವರ್ಷಗಳವರೆಗೆ ಸಂಪತ್ತಿನಿಂದ ಬರುತ್ತಿರುವ ಗಳಿಕೆಯೂ ನಕಾರಾತ್ಮಕವಾಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಆರ್‌ಬಿಐ ಈ ಕ್ರಮ ಜರುಗಿಸಿದೆ. ಇದರಿಂದ ಹೊಸ ಶಾಖೆ ತೆರೆಯುವಂತಿಲ್ಲ.ಲಾಭಾಂಶ ನೀಡುವಂತಿಲ್ಲ ಹಾಗೂಕಾರ್ಪೊರೇಟ್‌ ವಲಯಕ್ಕೆ ನೀಡುವ ಸಾಲದ ಪ್ರಮಾಣದಲ್ಲಿ ಇಳಿಕೆ ಮಾಡುವುದು ಕಡ್ಡಾಯವಾಗಿದೆ.

ಬ್ಯಾಂಕ್‌ನ ಕಾರ್ಯಕ್ಷಮತೆ ಸುಧಾರಿಸುವ ದೃಷ್ಟಿಯಿಂದ ಪಿಸಿಎ ವಿಧಿಸಲಾಗಿದೆ. ಇದರಿಂದ ದೈನಂದಿನ ಕೆಲಸಗಳಿಗೆ ಯಾವುದೇ ರೀತಿಯ ಅಡ್ಡಿ ಆಗುವುದಿಲ್ಲ ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಅನ್ನು ವಿಲೀನಗೊಳಿಸಿಕೊಳ್ಳುವ ಬ್ಯಾಂಕ್‌ನ ಉದ್ದೇಶಕ್ಕೆ ಇದು ಅಡ್ಡಿಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.