ADVERTISEMENT

ಆರ್‌ಬಿಐ ಹಣಕಾಸು ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಮುಂದುವರಿಕೆ

ಪಿಟಿಐ
Published 6 ಆಗಸ್ಟ್ 2021, 5:05 IST
Last Updated 6 ಆಗಸ್ಟ್ 2021, 5:05 IST
ಶಕ್ತಿಕಾಂತ ದಾಸ್
ಶಕ್ತಿಕಾಂತ ದಾಸ್   

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿಯನ್ನು ಶುಕ್ರವಾರ ಪ್ರಕಟಿಸಿದ್ದು, ಈಗಿರುವ ಶೇ 4ರ ರೆಪೊ (ಬಡ್ಡಿ) ದರವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಈಗಿರುವ ಶೇ 3.35ರ ರಿವರ್ಸ್ ರೆಪೊ ದರವನ್ನೂ ಹಾಗೆಯೇ ಮುಂದುವರಿಸಲಾಗಿದೆ.

ಇದರೊಂದಿಗೆ ಆರ್‌ಬಿಐ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ ಏಳು ಬಾರಿ ಬಡ್ಡಿ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡಂತಾಗಿದೆ. ಈ ಹಿಂದೆ 2020ರ ಮೇ 22ರಂದು ಆರ್‌ಬಿಐ ರೆಪೊ ದರದಲ್ಲಿ ಕಡಿತ ಮಾಡಿತ್ತು.

ADVERTISEMENT

ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಮತ್ತು ಹಣದುಬ್ಬರ ಪ್ರಮಾಣವನ್ನು ಮಿತಿಯಲ್ಲಿ ಇರಿಸುವ ಸಲುವಾಗಿ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ನಿರ್ಧಾರಕ್ಕೆ ಬಂದಿದೆ ಎಂದು ದಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.