ಮುಂಬೈ: ರಿಲಯನ್ಸ್ ಜನರಲ್ ಇನ್ಶುರನ್ಸ್, ‘ಕೋವಿಡ್–19’ಗೆ ರಕ್ಷಣೆ ಒದಗಿಸುವ ವಿಮೆ ಯೋಜನೆ ಪರಿಚಯಿಸಿದೆ.
ಪಾಲಿಸಿ ಅವಧಿ ಒಂದು ವರ್ಷದ್ದಾಗಿದೆ. 3 ತಿಂಗಳ ಮಗುವಿನಿಂದ ಹಿಡಿದು 60 ವರ್ಷದವರು ಪಾಲಿಸಿ ಖರೀದಿಗೆ ಅರ್ಹರಾಗಲಿದ್ದಾರೆ. ವಿಮೆ ಮೊತ್ತ ₹ 25 ಸಾವಿರದಿಂದ ₹ 2 ಲಕ್ಷದವರೆಗೆ ಇರಲಿದೆ.
ಕೊರೊನಾ ವೈರಸ್ ತಪಾಸಣೆ ಸಂದರ್ಭದಲ್ಲಿ ಪೊಸಿಟಿವ್ ವರದಿ ಬಂದರೆ ಶೇ 100ರಷ್ಟು ಮೊತ್ತವನ್ನು ಒಂದೇ ಕಂತಿನಲ್ಲಿ ಮತ್ತು ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಿದರೆ ವಿಮೆ ಮೊತ್ತದ ಶೇ 50ರಷ್ಟು ಪರಿಹಾರ ನೀಡುವ ಸೌಲಭ್ಯ ಇದರಲ್ಲಿ ಇದೆ. ಹೆಚ್ಚುವರಿ ಸೌಲಭ್ಯದಡಿ ವೇತನ ಇಲ್ಲವೇ ಉದ್ಯೋಗ ನಷ್ಟಕ್ಕೂ ಪರಿಹಾರ ಕಲ್ಪಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.