ADVERTISEMENT

ರಿಲಯನ್ಸ್‌ ಷೇರು ಏರಿಕೆ

ಪಿಟಿಐ
Published 29 ಫೆಬ್ರುವರಿ 2024, 14:14 IST
Last Updated 29 ಫೆಬ್ರುವರಿ 2024, 14:14 IST
ರಿಲಯನ್ಸ್‌
ರಿಲಯನ್ಸ್‌   

ನವದೆಹಲಿ: ವಾಲ್ಟ್‌ ಡಿಸ್ನಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಜಂಟಿ ಉದ್ಯಮ ಒಪ್ಪಂದಕ್ಕೆ ಸಹಿ ಹಾಕಿರುವ ಬೆನ್ನಲ್ಲೇ ರಿಲಯನ್ಸ್‌ ಷೇರಿನ ಮೌಲ್ಯ ಗುರುವಾರ ಶೇ 1ರಷ್ಟು ಏರಿಕೆ ಕಂಡಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ ಷೇರಿನ ಮೌಲ್ಯ ಶೇ 0.54 ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿಯಲ್ಲಿ ಶೇ 0.66ರಷ್ಟು ಏರಿಕೆ ಆಗಿದೆ. ಪ್ರತಿ ಷೇರಿನ ಬೆಲೆ ಕ್ರಮವಾಗಿ ₹2,924.75 ಮತ್ತು ₹2,930.75ಕ್ಕೆ ತಲುಪಿದೆ.

ದಿನದ ವಹಿವಾಟಿನಲ್ಲಿ ಷೇರಿನ ಮೌಲ್ಯವು ಶೇ 2ರಷ್ಟು ಏರಿಕೆಯಾಗಿತ್ತು. ಕಂಪನಿಯ ಒಟ್ಟು ಮಾರುಕಟ್ಟೆ ಮೌಲ್ಯ ₹19.78 ಲಕ್ಷ ಕೋಟಿಗೆ ಮುಟ್ಟಿದೆ.

ADVERTISEMENT

ಷೇರು ಸೂಚ್ಯಂಕಗಳು ಏರಿಕೆ:

ಸೆನ್ಸೆಕ್ಸ್‌ 195 ಅಂಶ ಏರಿಕೆಯಾಗಿ 72,500ಕ್ಕೆ ಸ್ಥಿರಗೊಂಡಿತು. ನಿಫ್ಟಿ 31 ಅಂಶ ಏರಿಕೆ ಕಂಡು 21,982ಕ್ಕೆ ಅಂತ್ಯಗೊಂಡಿತು. 

ಇಂಡಸ್‌ಇಂಡ್‌ ಬ್ಯಾಂಕ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಎಚ್‌ಸಿಎಲ್ ಟೆಕ್‌, ಪವರ್‌ಗ್ರಿಡ್‌, ಮಾರುತಿ, ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ, ಟೈಟನ್‌, ಏಷ್ಯನ್‌ ಪೇಂಟ್ಸ್‌, ನೆಸ್ಟ್ಲೆ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ನ ಷೇರು ಮೌಲ್ಯ ಗಳಿಕೆ ಕಂಡಿವೆ.

ಹಿಂದುಸ್ತಾನ್‌ ಯೂನಿಲಿವರ್‌, ಭಾರ್ತಿ ಏರ್‌ಟೆಲ್‌, ಟಾಟಾ ಮೋಟರ್ಸ್‌, ಐಟಿಸಿ, ಟೆಕ್ ಮಹೀಂದ್ರ ಮತ್ತು ಎಕ್ಸಿಸ್‌ ಬ್ಯಾಂಕ್‌ನ ಷೇರು ಮೌಲ್ಯ ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.