ADVERTISEMENT

ಮುಂಬರುವ ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ₹75000 ಕೋಟಿ ಹೂಡಿಕೆ: ಮುಕೇಶ್ ಅಂಬಾನಿ

ನವದೆಹಲಿಯಲ್ಲಿ ನಡೆದ ರೈಸಿಂಗ್ ನಾರ್ಥ್‌ವೆಸ್ಟ್ ಇನ್‌ವೆಸ್ಟರ್ಸ್‌ ಸಮ್ಮಿಟ್ ಉದ್ಘಾಟಿಸಿ ಅವರು ಮಾತನಾಡಿದರು.

​ಪ್ರಜಾವಾಣಿ ವಾರ್ತೆ
Published 23 ಮೇ 2025, 7:59 IST
Last Updated 23 ಮೇ 2025, 7:59 IST
<div class="paragraphs"><p>ರಿಲಯನ್ಸ್ ಗ್ರೂಪ್ ಚೇರ್ಮನ್ ಮುಕೇಶ್ ಅಂಬಾನಿ,ನೀತಾ ಅಂಬಾನಿ</p></div>

ರಿಲಯನ್ಸ್ ಗ್ರೂಪ್ ಚೇರ್ಮನ್ ಮುಕೇಶ್ ಅಂಬಾನಿ,ನೀತಾ ಅಂಬಾನಿ

   

ನವದೆಹಲಿ: ಈಶಾನ್ಯ ಭಾರತದ ರಾಜ್ಯಗಳಲ್ಲಿ ಮುಂಬರುವ ವರ್ಷಗಳಲ್ಲಿ ಸುಮಾರು ₹75 ಸಾವಿರ ಕೋಟಿ ಹೂಡಿಕೆ ಮಾಡಲಿದ್ದೇವೆ ಎಂದು ಉದ್ಯಮಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ರೈಸಿಂಗ್ ನಾರ್ಥ್‌ವೆಸ್ಟ್ ಇನ್‌ವೆಸ್ಟರ್ಸ್‌ ಸಮ್ಮಿಟ್ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌ನ ಟೆಲಿಕಾಂ ಹಾಗೂ ತೈಲ ಉದ್ಯಮಗಳಿಂದ ₹75 ಸಾವಿರ ಕೋಟಿ ಹೂಡಿಕೆ ಮಾಡಲಿದ್ದೇವೆ ಎಂದು ಭಾರತದ ಶ್ರೀಮಂತ ಉದ್ಯಮಿ ಭರವಸೆ ನೀಡಿದರು.

ಕಳೆದ 40 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ₹30 ಸಾವಿರ ಕೋಟಿ ಹೂಡಿಕೆ ಮಾಡಿದ್ದೇವೆ. ಕಾರ್ಪೊರೇಟ್ ಹೊಣೆಗಾರಿಕೆ ಅಡಿ ಮಣಿಪುರದಲ್ಲಿ 150 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗುವುದು ಎಂದೂ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.