ಡಾಲರ್ ವಿರುದ್ಧ ಮತ್ತೆ ಕುಸಿದ ರೂಪಾಯಿ ಮೌಲ್ಯ
ನವದೆಹಲಿ: ವಿದೇಶಿ ವಿನಿಮಯದಲ್ಲಿ ಅಮೆರಿಕ ಡಾಲರ್ ಎದುರು 15 ಪೈಸೆ ಕುಸಿದಿರುವ ಭಾರತದ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟ 88.27ಕ್ಕೆ ತಲುಪಿದೆ.
ವಿದೇಶಿ ಬಂಡವಾಳದ ಸ್ಥಿರವಾದ ಹೊರಹರಿವು ಮತ್ತು ಅಮೆರಿಕದಿಂದ ಮತ್ತಷ್ಟು ಸುಂಕ ವಿಧಿಸುವ ಆತಂಕ ಈ ಕುಸಿತಕ್ಕೆ ಕಾರಣ ಎಂದು ವರದಿ ತಿಳಿಸಿದೆ.
ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ₹88.11ರಲ್ಲಿ ಆರಂಭವಾದ ರೂಪಾಯಿ ಮೌಲ್ಯ ದಿನದ ವಹಿವಾಟಿನಲ್ಲಿ ₹88.38ಕ್ಕೂ ಕುಸಿದಿತ್ತು. ಬಳಿಕ, ವಹಿವಾಟು ಅಂತ್ಯಕ್ಕೆ ₹88.27ರಲ್ಲಿ ಕೊನೆಗೊಂಡಿತು.
ಗುರುವಾರ 10 ಪೈಸೆ ಕಳೆದುಕೊಂಡು ಸಾರ್ವಕಾಲಿಕ ಕನಿಷ್ಠ ಮಟ್ಟ ₹88.12ಕ್ಕೆ ತಲುಪಿದ್ದ ರೂಪಾಯಿ ಮೌಲ್ಯ ಸತತ ಕುಸಿಯುತ್ತಿದೆ.
ಭಾರತದ ಐಟಿ ವಲಯದ ಮೇಲೆ ಟ್ರಂಪ್ ತೆರಿಗೆ ಭೀತಿ ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಫಿನೆಕ್ಸ್ ಟ್ರೆಶರಿ ಅಡ್ವೈಸರ್ಸ್ ಎಲ್ಎಲ್‌ಪಿ ನಿರ್ದೇಶಕ ಅನಿಲ್ ಕುಮಾರ್ ಭನ್ಸಾಲಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಘೋಷಣೆಗಳ ನಂತರ ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.