ADVERTISEMENT

ಭಾರತ, ಚೀನಾಕ್ಕೆ ಹೆಚ್ಚು ತೈಲ ರವಾನಿಸಿದ ರಷ್ಯಾ

ರಾಯಿಟರ್ಸ್
Published 5 ಜನವರಿ 2023, 10:40 IST
Last Updated 5 ಜನವರಿ 2023, 10:40 IST
   

ಸಿಂಗಪುರ/ನವದೆಹಲಿ: ಆರ್ಕ್ಟಿಕ್‌ ಪ್ರದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲವನ್ನು ರಷ್ಯಾ ಹೆಚ್ಚಿನ ಪ್ರಮಾಣದಲ್ಲಿ, ಹೆಚ್ಚಿನ ರಿಯಾಯಿತಿ ದರದಲ್ಲಿ ಭಾರತ ಮತ್ತು ಚೀನಾಕ್ಕೆ ರಫ್ತು ಮಾಡುತ್ತಿದೆ. ಹಿಂದಿನ ತಿಂಗಳು ಯುರೋಪ್‌, ರಷ್ಯಾದ ತೈಲದ ಮೇಲೆ ನಿರ್ಬಂಧ ಹೇರಿದ ನಂತರ ಈ ಬೆಳವಣಿಗೆ ಆಗಿದೆ.

ಆರ್ಕ್ಟಿಕ್‌ ಪ್ರದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲವು ಸಾಮಾನ್ಯವಾಗಿ ಪೂರ್ವದ ದೇಶಗಳಿಗೆ ಪೂರೈಕೆ ಆಗುತ್ತಿರಲಿಲ್ಲ. ಆದರೆ ರಷ್ಯಾ ತೈಲದ ಬೆಲೆಯ ಮೇಲೆ ಐರೋಪ್ಯ ಒಕ್ಕೂಟ, ಜಿ7 ದೇಶಗಳು ಮತ್ತು ಆಸ್ಟ್ರೇಲಿಯಾ ಡಿಸೆಂಬರ್‌ನಲ್ಲಿ ಮಿತಿ ಹೇರಿದ ನಂತರದಲ್ಲಿ ರಷ್ಯಾದ ಈ ಕಚ್ಚಾ ತೈಲವನ್ನು ಬೇರೆ ಮಾರುಕಟ್ಟೆಗಳಿಗೆ ರವಾನಿಸಲಾಗುತ್ತಿದೆ.

‘ಹಿಂದೆ ಈ ಕಚ್ಚಾ ತೈಲವು ಯುರೋಪಿಗೆ ರಫ್ತಾಗುತ್ತಿತ್ತು. ಈಗ ಅದು ಬೇರೆಡೆ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕಿದೆ’ ಎಂದು ಸಿಂಗಪುರ ಮೂಲದ ವರ್ತಕರೊಬ್ಬರು ತಿಳಿಸಿದ್ದಾರೆ.

ADVERTISEMENT

ಆರ್ಕ್ಟಿಕ್‌ ಕಚ್ಚಾ ತೈಲವು ಭಾರತಕ್ಕೆ ಪೂರೈಕೆಯಾಗುವುದು ಮೇ ನಂತರದಲ್ಲಿ ಹೆಚ್ಚಾಗಿದೆ. ನವೆಂಬರ್‌ನಲ್ಲಿ 66.7 ಲಕ್ಷ ಬ್ಯಾರೆಲ್‌, ಡಿಸೆಂಬರ್‌ನಲ್ಲಿ 41 ಲಕ್ಷ ಬ್ಯಾರೆಲ್‌ ತೈಲ ಭಾರತಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.