ಮಹಾಕುಂಭ ಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಸಿದ್ಧತೆ
ಪಿಟಿಐ ಚಿತ್ರ
ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾರ್ಚ್ 13ರಿಂದ ಫೆ. 25ರವರೆಗೆ ನಡೆಯಲಿರುವ ಮಹಾಕುಂಭ ಮೇಳಕ್ಕೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ಮೂಲಕ 45 ಸಾವಿರ ಟನ್ ಉಕ್ಕು ಪೂರೈಕೆ ಮಾಡಲಾಗಿದೆ.
ಇದರಲ್ಲಿ ಚೌಕಳಿ ತಟ್ಟೆಗಳು, ಹಾಟ್‌ಸ್ಟ್ರಿಪ್ ಮಿಲ್ ಪ್ಲೇಟ್‌ಗಳು, ಮೈಲ್ಡ್ ಸ್ಟೀಲ್ ಪ್ಲೇಟ್‌ಗಳು, ಆ್ಯಂಗಲ್ ಮತ್ತು ಜೋಯಿಸ್ಟ್‌ಗಳನ್ನು ಖರೀದಿಸಲಾಗಿದೆ. 2013ರಲ್ಲಿ ನಡೆದಿದ್ದ ಕುಂಭ ಮೇಳಕ್ಕೂ SAIL ಉಕ್ಕು ಪೂರೈಕೆ ಮಾಡಿತ್ತು.
ಮಹಾಕುಂಭ ಮೇಳದ ಯಶಸ್ಸಿಗಾಗಿ ತಾತ್ಕಾಲಿಕ ಕಟ್ಟಡಗಳ ನಿರ್ಮಾಣದಲ್ಲಿ ಉಕ್ಕು ಬಹುಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿ ಸೇತುವೆ, ಉಕ್ಕಿನ ತಾತ್ಕಾಲಿಕ ಸೇತುವೆ, ಕಾಲು ದಾರಿಗಳು, ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಬಹುತೇಕವು ಲೋಕೋಪಯೋಗಿ ಇಲಾಖೆ, ಉತ್ತರ ಪ್ರದೇಶ ರಾಜ್ಯ ಸೇತುವೆಗಳ ನಿಗಮ, ವಿದ್ಯುಚ್ಛಕ್ತಿ ಮಂಡಳಿ ಮೂಲಕ ಕಾರ್ಯಗತಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
SAIL 2024ರಲ್ಲಿ ₹897.15 ಕೋಟಿ ಲಾಭ ಗಳಿಸಿದ್ದು, ಇದು 2023ಕ್ಕೆ ಹೋಲಿಸಿದಲ್ಲಿ ಶೇ 31ರಷ್ಟು ಕುಸಿತ ದಾಖಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.