ADVERTISEMENT

ರಿಲಯನ್ಸ್, ಮುಕೇಶ್ ಅಂಬಾನಿಗೆ ₹15 ಕೋಟಿ ದಂಡ ವಿಧಿಸಿದ ಸೆಬಿ: ಏಕೆ ಗೊತ್ತೇ?

ಪಿಟಿಐ
Published 2 ಜನವರಿ 2021, 4:25 IST
Last Updated 2 ಜನವರಿ 2021, 4:25 IST
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ    

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್‌) ಮತ್ತು ಅದರ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ದಂಡ ವಿಧಿಸಿದೆ. ಹಿಂದಿನ ರಿಲಯನ್ಸ್ ಪಟ್ರೋಲಿಯಂ ಲಿಮಿಟೆಡ್‌ (ಆರ್‌ಪಿಎಲ್‌) ಕಂಪನಿಯ ಷೇರುಗಳ ಬೆಲೆಯಲ್ಲಿ 2007ರಲ್ಲಿ ಕೃತಕವಾಗಿ ಬದಲಾವಣೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಈ ದಂಡ ವಿಧಿಸಲಾಗಿದೆ.

ಆರ್‌ಐಎಲ್‌ಗೆ ₹ 25 ಕೋಟಿ ದಂಡ ಹಾಗೂ ಅಂಬಾನಿ ಅವರಿಗೆ ₹ 15 ಕೋಟಿ ದಂಡವನ್ನು ಸೆಬಿ ವಿಧಿಸಿದೆ. ಅಲ್ಲದೆ, ನವಿ ಮುಂಬೈ ಎಸ್‌ಇಜೆಡ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯು ₹ 20 ಕೋಟಿ ದಂಡ, ಮುಂಬೈ ಎಸ್‌ಇಜೆಡ್‌ ಲಿಮಿಟೆಡ್‌ ಕಂಪನಿಯು ₹ 10 ಕೋಟಿ ದಂಡ ಪಾವತಿಸಬೇಕು ಎಂದು ಕೂಡ ಸೆಬಿ ಹೇಳಿದೆ. ಈ ವಿಚಾರವಾಗಿ ಆರ್‌ಐಎಲ್‌ನಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT