ADVERTISEMENT

ಷೇರುಪೇಟೆ ಸೂಚ್ಯಂಕಗಳ ಏರಿಕೆ

ಪಿಟಿಐ
Published 2 ಫೆಬ್ರುವರಿ 2026, 15:40 IST
Last Updated 2 ಫೆಬ್ರುವರಿ 2026, 15:40 IST
<div class="paragraphs"><p>ದಿಢೀರ್‌ ಏರಿಕೆ  ಕಂಡ ಷೇರುಪೇಟೆ  ವಹಿವಾಟು</p></div>

ದಿಢೀರ್‌ ಏರಿಕೆ ಕಂಡ ಷೇರುಪೇಟೆ ವಹಿವಾಟು

   

ಮುಂಬೈ: ಬಜೆಟ್‌ ಮಂಡನೆಯ ದಿನ ಭಾರಿ ಕುಸಿತ ದಾಖಲಿಸಿದ್ದ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಗಣನೀಯ ಪ್ರಮಾಣದ ಏರಿಕೆ ಕಂಡವು.

ಹೂಡಿಕೆದಾರರು ಬ್ಲ್ಯೂಚಿಪ್‌ ವರ್ಗದ ತೈಲ ಮತ್ತು ಅನಿಲ, ಬ್ಯಾಂಕಿಂಗ್ ಹಾಗೂ ಆಟೊಮೊಬೈಲ್‌ ಕಂಪನಿಗಳ ಷೇರುಗಳನ್ನು ಖರೀದಿಸಿದರು.

ADVERTISEMENT

ಮುಂಬೈ ಷೇರು‍ಪೇಟೆಯ ಸೆನ್ಸೆಕ್ಸ್‌ ಸೋಮವಾರ 943 ಅಂಶ ಏರಿಕೆ ಕಂಡಿದೆ, ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ 262 ಅಂಶ ಏರಿಕೆ ಕಂಡಿದೆ.

ಆಕರ್ಷಕ ಮೌಲ್ಯಕ್ಕೆ ಲಭ್ಯವಿದ್ದ ಷೇರುಗಳನ್ನು ಹೂಡಿಕೆದಾರರು ಹೆಚ್ಚು ಖರೀದಿಸಿದ್ದುದು ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯು ಸೂಚ್ಯಂಕಗಳ ಏರಿಕೆಗೆ ನೆರವಾದವು ಎಂದು ವರ್ತಕರು ತಿಳಿಸಿದ್ದಾರೆ.

‘ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ಹೆಚ್ಚಿಸುವ ಬಜೆಟ್‌ ಪ್ರಸ್ತಾವ ಹಾಗೂ 2026–27ನೇ ಸಾಲಿನಲ್ಲಿ ಸರ್ಕಾರವು ಹೆಚ್ಚು ಸಾಲ ಮಾಡಲಿದೆ ಎಂಬ ಕಾರಣದಿಂದಾಗಿ ಭಾನುವಾರ ಮಾರುಕಟ್ಟೆ ಕುಸಿದಿತ್ತು. ಆದರೆ ಬಜೆಟ್‌ನಲ್ಲಿ ಸರ್ಕಾರದ ನೀತಿಗಳು ಮುಂದುವರಿಕೆ ಆಗಿರುವುದು ಮತ್ತು ಆರ್ಥಿಕ ಬೆಳವಣಿಗೆಗೆ ಸ್ಪಷ್ಟ ಉತ್ತೇಜನ ಇರುವುದು ದೀರ್ಘಾವಧಿಯಲ್ಲಿ ಕಂಪನಿಗಳ ವರಮಾನ ಹೆಚ್ಚಬಹುದು ಎಂಬ ವಿಶ್ವಾಸ ಮೂಡಿಸಿದೆ’ ಎಂದು ಜಿಯೋಜಿತ್‌ ಇನ್ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.