ADVERTISEMENT

ರ‌ಸ್ತೆ ಸುರಕ್ಷತೆ ಕುರಿತ ಹಾಡು ಶೀಘ್ರವೇ 22 ಭಾಷೆಗಳಲ್ಲಿ ಬಿಡುಗಡೆ:ನಿತಿನ್ ಗಡ್ಕರಿ

ಪಿಟಿಐ
Published 28 ಮೇ 2025, 14:23 IST
Last Updated 28 ಮೇ 2025, 14:23 IST
<div class="paragraphs"><p>ನಿತಿನ್‌ ಗಡ್ಕರಿ –ಪಿಟಿಐ ಚಿತ್ರ</p></div>

ನಿತಿನ್‌ ಗಡ್ಕರಿ –ಪಿಟಿಐ ಚಿತ್ರ

   

ನವದೆಹಲಿ: ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಹಾಡಿಗೆ ಹಿನ್ನೆಲೆ ಗಾಯಕ ಶಂಕರ್‌ ಮಹದೇವನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶೀಘ್ರವೇ ಈ ಹಾಡನ್ನು 22 ಭಾಷೆಗಳಲ್ಲೂ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ಹಂಚಿಕೊಳ್ಳುವ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ’ ಎಂದರು. 

ADVERTISEMENT

ಕಾರು ಚಾಲನೆ ವೇಳೆ ಕಡ್ಡಾಯವಾಗಿ ಸೀಟ್‌ಬೆಲ್ಟ್‌ ಧರಿಸಬೇಕಿದೆ. ರಸ್ತೆ ಸುರಕ್ಷತಾ ನಿಯಮಾವಳಿಗಳನ್ನು ಉಲ್ಲಂಘಿಸಬಾರದು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.