ADVERTISEMENT

Gold & Silver Price: ಬೆಳ್ಳಿ ಬೆಲೆ ಕೆ.ಜಿಗೆ ₹2.71 ಲಕ್ಷ; ಚಿನ್ನದ ದರವೂ ಏರಿಕೆ

ಪಿಟಿಐ
Published 13 ಜನವರಿ 2026, 13:56 IST
Last Updated 13 ಜನವರಿ 2026, 13:56 IST
   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಹೊಸ ದಾಖಲೆ ಬರೆದಿದೆ. ಕೆ.ಜಿ. ಬೆಳ್ಳಿಯ ಬೆಲೆಯು ₹6,000 ಹೆಚ್ಚಾಗಿ ₹2.71 ಲಕ್ಷಕ್ಕೆ ತಲುಪಿದೆ.

ಸೋಮವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ₹15 ಸಾವಿರದಷ್ಟು ಹೆಚ್ಚಾಗಿತ್ತು. ಎರಡು ದಿನಗಳಲ್ಲಿ ಬೆಲೆಯು ₹21 ಸಾವಿರದಷ್ಟು ಏರಿಕೆ ಆಗಿದೆ.

2026ರಲ್ಲಿ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹32 ಸಾವಿರದಷ್ಟು, ಅಂದರೆ ಶೇ 13.4ರಷ್ಟು ಹೆಚ್ಚಾಗಿದೆ.

ADVERTISEMENT

ಶೇಕಡ 99.9ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹400ರಷ್ಟು ಹೆಚ್ಚಾಗಿದ್ದು ದಾಖಲೆಯ ₹1,45,000ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.