ADVERTISEMENT

ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ: ಸ್ಟಾರ್‌ಲಿಂಕ್‌ಗೆ ಇನ್‌–ಸ್ಪೇಸ್‌ ಪರವಾನಗಿ

ರಾಯಿಟರ್ಸ್
ಪಿಟಿಐ
Published 9 ಜುಲೈ 2025, 11:49 IST
Last Updated 9 ಜುಲೈ 2025, 11:49 IST
<div class="paragraphs"><p>ಸ್ಟಾರ್‌ಲಿಂಕ್‌ ಕಾರ್ಯಕ್ರಮದಲ್ಲಿ ಎಲಾನ್‌ ಮಸ್ಕ್‌</p></div>

ಸ್ಟಾರ್‌ಲಿಂಕ್‌ ಕಾರ್ಯಕ್ರಮದಲ್ಲಿ ಎಲಾನ್‌ ಮಸ್ಕ್‌

   

ರಾಯಿಟರ್ಸ್‌ ಚಿತ್ರ

ನವದೆಹಲಿ/ಬೆಂಗಳೂರು: ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ಆರಂಭಿಸಲು ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (ಇನ್‌–ಸ್ಪೇಸ್‌) ಪರವಾನಗಿ ನೀಡಿದೆ.

ADVERTISEMENT

ಪರವಾನಗಿಯ ಅವಧಿ ಐದು ವರ್ಷ ಎಂದು ಇನ್‌–ಸ್ಪೇಸ್‌ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಸ್ಟಾರ್‌ಲಿಂಕ್‌ ಭಾರತದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು 2022ರಿಂದ ಕಾಯುತ್ತಿದೆ. ಕಳೆದ ತಿಂಗಳು ದೂರಸಂಪರ್ಕ ಸಚಿವಾಲಯವು ಸೇವೆ ಆರಂಭಿಸಲು ಅನುಮತಿ ನೀಡಿತ್ತು. ಆದರೆ, ದೇಶದ ಬಾಹ್ಯಾಕಾಶ ಇಲಾಖೆ ಅನುಮತಿ ಬೇಕಿತ್ತು. ಇದೀಗ ಅನುಮತಿ ದೊರೆತಿದೆ.

ಸ್ಟಾರ್‌ಲಿಂಕ್ ಮತ್ತು ಬಾಹ್ಯಾಕಾಶ ಇಲಾಖೆ ಈ ಕುರಿತು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಸ್ಟಾರ್‌ಲಿಂಕ್‌ ಈಗ ಸರ್ಕಾರದಿಂದ ತರಂಗಾಂತರ ಪಡೆದುಕೊಳ್ಳಬೇಕಿದೆ ಮತ್ತು ಭದ್ರತಾ ನಿಯಮಗಳನ್ನು ಪಾಲಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.