ADVERTISEMENT

ಸುಂಕ: ಪರ್ಯಾಯ ಮಾರುಕಟ್ಟೆಗೆ ಅನ್ವೇಷಣೆ

ಪಿಟಿಐ
Published 23 ಆಗಸ್ಟ್ 2025, 16:05 IST
Last Updated 23 ಆಗಸ್ಟ್ 2025, 16:05 IST
ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪಿಇಡಿಎ)
ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪಿಇಡಿಎ)   

ಕೊಚ್ಚಿ: ಅಮೆರಿಕವು ಭಾರತದ ಸರಕುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಸುಂಕ ಹೇರಿರುವುದು ದೇಶದ ಸಾಗರೋತ್ಪನ್ನಗಳ ಉದ್ಯಮದ ಮೇಲೆ ಪ್ರಭಾವ ಬೀರಿದ್ದು, ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಲಾಗುತ್ತಿದೆ ಎಂದು ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಂಪಿಇಡಿಎ) ಅಧ್ಯಕ್ಷ ಡಿ.ವಿ. ಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರ್ಕಾರವು ರಷ್ಯಾ, ಬ್ರಿಟನ್‌, ಐರೋಪ್ಯ ಒಕ್ಕೂಟ, ನಾರ್ವೆ, ಸ್ವಿಟ್ಜರ್ಲೆಂಡ್‌, ಪಶ್ಚಿಮ ಏಷ್ಯಾ, ದಕ್ಷಿಣ ಕೊರಿಯಾವನ್ನು ಸಾಗರೋತ್ಪನ್ನಗಳ ಪಾಲಿನ ಹೊಸ ಆದ್ಯತಾ ಮಾರುಕಟ್ಟೆಗಳು ಎಂದು ಗುರುತಿಸಿದೆ ಎಂದು ಎಂಪಿಇಡಿಎ ಕಾರ್ಯಕ್ರಮದಲ್ಲಿ ಶನಿವಾರ ಹೇಳಿದ್ದಾರೆ.

ಮಾರುಕಟ್ಟೆ ಮತ್ತು ಸಾಗರೋತ್ಪನ್ನದ ವಿಧಗಳಲ್ಲಿ ವೈವಿಧ್ಯತೆ ಅಗತ್ಯವಿದೆ. ಈಕ್ವೆಡಾರ್, ಮುಂಬರುವ ದಿನಗಳಲ್ಲಿ ಭಾರತದ ಸಾಗರೋತ್ಪನ್ನಗಳ ಮಾರುಕಟ್ಟೆಗೆ ತೀವ್ರ ಸ್ಪರ್ಧೆ ನೀಡಬಹುದು ಎಂದು ಹೇಳಿದ್ದಾರೆ. 

ADVERTISEMENT

ಅಮೆರಿಕಕ್ಕೆ 3,11,948 ಟನ್‌ ಫ್ರೋಜನ್ ಸೀಗಡಿ ರಫ್ತಾಗಿದ್ದರೆ, ಚೀನಾಗೆ 1,36,164 ಟನ್ ರಫ್ತಾಗಿದೆ. ರಾಜ್ಯಗಳ ಪೈಕಿ ಆಂಧ್ರಪ್ರದೇಶದಿಂದ ಸಾಗರೋತ್ಪನ್ನಗಳ ರಫ್ತು ಹೆಚ್ಚಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು, ಕೇರಳ, ಗುಜರಾತ್, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.