ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಸೋಮವಾರ 10 ಗ್ರಾಂಗೆ ₹ 380ರಂತೆ ಇಳಿಕೆಯಾಗಿ ₹ 47,900ಕ್ಕೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ 10ಗ್ರಾಂಗೆ ₹ 48,280ರಂತೆ ವಹಿವಾಟು ಅಂತ್ಯಗೊಂಡಿತ್ತು.
ಬೆಳ್ಳಿ ಬೆಲೆಯೂ ಕೆ.ಜಿಗೆ ₹ 590ರಂತೆ ಇಳಿಕೆಯಾಗಿ ₹48,790 ರಿಂದ ₹ 48,200ಕ್ಕೆ ಇಳಿಕೆಯಾಗಿದೆ.
‘ಜಗತ್ತಿನಾದ್ಯಂತ ಎರಡನೇ ಹಂತದ ಕೊರೊನಾ ವೈರಸ್ ಸೋಂಕು ಹರಡುವ ಆತಂಕ ಮೂಡಿದೆ. ಇದರಿಂದಾಗಿ ಸೂಚ್ಯಂಕದ ಜತೆಗೆ ಚಿನ್ನದ ಬೆಲೆಯೂ ಇಳಿಕೆ ಕಂಡಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್ ಪಟೇಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.