ADVERTISEMENT

ತೆಳುವಾದ ವಾಚ್ ಬಿಡುಗಡೆ ಮಾಡಿದ ಟೈಟನ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 16:03 IST
Last Updated 22 ನವೆಂಬರ್ 2025, 16:03 IST
ಟೈಟನ್ ಬಿಡುಗಡೆ ಮಾಡಿರುವ ತೆಳುವಾದ ವಾಚ್
ಟೈಟನ್ ಬಿಡುಗಡೆ ಮಾಡಿರುವ ತೆಳುವಾದ ವಾಚ್   

ಬೆಂಗಳೂರು: ಟಾಟಾ ಸಮೂಹಕ್ಕೆ ಸೇರಿದ ಟೈಟನ್ ಕಂಪನಿಯು ‘ಟೈಟನ್ ಎಜ್‌ ಅಲ್ಟ್ರಾ ಸ್ಲಿಮ್’ ವಾಚ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ವಿಶ್ವದ ಅತ್ಯಂತ ತೆಳುವಾದ ಅನಲಾಗ್‌ ವಾಚ್‌ಗಳಲ್ಲಿ ಒಂದಾಗಿದೆ ಎಂದು ತಿಳಿಸಿದೆ.

ಈ ವಾಚ್‌ ಕೇವಲ 3.3 ಮಿ.ಮೀ ದಪ್ಪವಿದೆ ಎಂದು ಪ್ರಕಟಣೆ ತಿಳಿಸಿದೆ. ಜಿಮ್‌ಸನ್ ವಾಚಸ್ ಸಹಯೋಗದಲ್ಲಿ ಈ ವಾಚ್ ಅನ್ನು ಅನಾವರಣಗೊಳಿಸಲಾಗಿದೆ.

‘ಎಜ್‌ ಸರಣಿಯ ಉತ್ತಮ ಉತ್ಪನ್ನ ಇದೀಗ ಬಿಡುಗಡೆಯಾಗಿದೆ. ಉತ್ಕೃಷ್ಟ ವಿನ್ಯಾಸ, ಅಪೂರ್ವ ನಿಖರತೆ ಮತ್ತು ಮಿನಿಮಲಿಸಂನ ಸಮ್ಮಿಶ್ರಣದಂತೆ ಈ ವಾಚು ಮೂಡಿಬಂದಿದೆ’ ಎಂದು ಟೈಟನ್ ಕಂಪನಿಯ ಹಿರಿಯ ಅಧಿಕಾರಿ ರಾಹುಲ್ ಪಾಂಡೆ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.