ADVERTISEMENT

ಟ್ವಿಟರ್‌ ಖರೀದಿಸಲು ಇಲಾನ್‌ ಮಸ್ಕ್‌ಗೆ ಇದ್ದ ಸಮಯ ಅಂತ್ಯ

ರಾಯಿಟರ್ಸ್
Published 3 ಜೂನ್ 2022, 13:47 IST
Last Updated 3 ಜೂನ್ 2022, 13:47 IST
   

ವಾಷಿಂಗ್ಟನ್‌: ಸಾಮಾಜಿಕ ಮಾಧ್ಯಮ ಟ್ವಿಟರ್‌ಅನ್ನು 44 ಶತಕೋಟಿ ಡಾಲರ್‌ ಮೊತ್ತಕ್ಕೆ ಖರೀದಿಸಲು ಇಲಾನ್‌ ಮಸ್ಕ್‌ಗೆ ಎಚ್‌ಎಸ್‌ಆರ್‌ ಕಾಯಿದೆ ಅಡಿಯಲ್ಲಿ ಇದ್ದ ‘ಅವಧಿ’ಯು ಪೂರ್ಣಗೊಂಡಿದೆ ಎಂದು ಟ್ವಿಟರ್‌ ಶುಕ್ರವಾರ ಹೇಳಿದೆ.

ಇಲ್ಲಿಂದಾಚೆಗೆ ಒಪ್ಪಂದ ಪೂರ್ಣಗೊಳ್ಳಬೇಕಿದ್ದರೆ ಷರತ್ತುಗಳು ಅನ್ವಯವಾಗಲಿವೆ. ಟ್ವಿಟರ್ ಪಾಲುದಾರರು ಮತ್ತು ನಿಯಂತ್ರಕರ ಅನುಮೋದನೆ ಬೇಕಾಗುತ್ತದೆ ಎಂದು ಟ್ವಿಟರ್‌ ತಿಳಿಸಿದೆ.

ಎಚ್‌ಎಸ್‌ಆರ್‌ ಕಾಯಿದೆ (1976ರ ಹಾರ್ಟ್-ಸ್ಕಾಟ್-ರೊಡಿನೊ ಕಾಯಿದೆ) ಪ್ರಕಾರ ಯಾವುದೇ ದೊಡ್ಡ ವಹಿವಾಟುಗಳು ನಡೆಯುವುದಿದ್ದರೆ ಅದಕ್ಕೆ ಸಂಬಂಧಿಸಿದ ಎರಡೂ ಕಡೆಯವರು ಅಮೆರಿಕದ ‘ಫೆಡರಲ್‌ ಟ್ರೇಡ್‌ ಕಮಿಷನ್‌’ ಮತ್ತು ‘ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಆಂಟಿ–ಟ್ರಸ್ಟ್ ಡಿವಿಷನ್’ಗೆ ತಿಳಿಸಬೇಕಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.