ADVERTISEMENT

ರಷ್ಯಾ ಜೊತೆ ವಹಿವಾಟು ಸ್ಥಗಿತ: ಟಾಟಾ ಸ್ಟೀಲ್

ಪಿಟಿಐ
Published 21 ಏಪ್ರಿಲ್ 2022, 3:24 IST
Last Updated 21 ಏಪ್ರಿಲ್ 2022, 3:24 IST
   

ನವದೆಹಲಿ: ರಷ್ಯಾ ಜೊತೆ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸುತ್ತಿರುವುದಾಗಿ ಟಾಟಾ ಸ್ಟೀಲ್ ಬುಧವಾರ ಹೇಳಿದೆ. ರಷ್ಯಾ–ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಕಂಪನಿ ಈ ತೀರ್ಮಾನ ಕೈಗೊಂಡಿದೆ.

‘ರಷ್ಯಾದಲ್ಲಿ ಟಾಟಾ ಸ್ಟೀಲ್‌ನ ವಹಿವಾಟು ಇಲ್ಲ, ಅಲ್ಲಿ ಕಂಪನಿಯ ನೌಕರರೂ ಇಲ್ಲ. ನಾವು ರಷ್ಯಾ ಜೊತೆ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸುವ ತೀರ್ಮಾನವನ್ನು ಪ್ರಜ್ಞಾ‍ಪೂರ್ವಕವಾಗಿ ಕೈಗೊಂಡಿದ್ದೇವೆ’ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ರಷ್ಯಾ ಮೇಲಿನ ಅವಲಂಬನೆ ತಗ್ಗಿಸಲು ಕಂಪನಿಯು ಭಾರತ, ಬ್ರಿಟನ್‌ ಮತ್ತು ನೆದರ್ಲೆಂಡ್ಸ್‌ನಲ್ಲಿ ಹೊಂದಿರುವ ಎಲ್ಲ ಘಟಕಗಳಿಗೆ ಕಚ್ಚಾ ವಸ್ತುಗಳನ್ನು ಪರ್ಯಾಯ ಮೂಲಗಳಿಂದ ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ. ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಟಾಟಾ ಸ್ಟೀಲ್ ಕಂಪನಿಯು ರಷ್ಯಾದಿಂದ ಸೀಮಿತ ಪ್ರಮಾಣದಲ್ಲಿ ಕಲ್ಲಿದ್ದಲು ತರಿಸಿಕೊಳ್ಳುತ್ತಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.