ADVERTISEMENT

ಕೈಕೊಟ್ಟ UPI: ಕಾರ್ಯನಿರ್ವಹಿಸದ ಗೂಗಲ್‌ಪೇ, ಫೋನ್‌ಪೇ; ಗ್ರಾಹಕರ ಪರದಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2025, 15:26 IST
Last Updated 26 ಮಾರ್ಚ್ 2025, 15:26 IST
<div class="paragraphs"><p>ಯುಪಿಐ</p></div>

ಯುಪಿಐ

   

(ಐಸ್ಟೋಕ್ ಚಿತ್ರ)

ಬೆಂಗಳೂರು: ಯುನಿಫೈಡ್‌ ಪೇಮೆಂಟ್ ಇಂಟರ್‌ಫೇಸ್‌ (ಯುಪಿಐ) ಸೇವೆಯು ದೇಶದ ಹಲವೆಡೆ ಬುಧವಾರ ಸಂಜೆ ಕಾರ್ಯನಿರ್ವಹಿಸದ ಕಾರಣ, ವ್ಯಾಪಾರ, ವಹಿವಾಟಿನಲ್ಲಿ ಸಾಕಷ್ಟು ಸಮಸ್ಯೆ ತಲೆದೋರಿದೆ. ಗ್ರಾಹಕರು ಮತ್ತು ವರ್ತಕರು ತೀವ್ರವಾಗಿ ಪರದಾಡಿದ ಕುರಿತು ವರದಿಗಳಾಗಿವೆ.

ADVERTISEMENT

ಯುಪಿಐ ಆ್ಯಪ್‌ಗಳ ಮೂಲಕ ಪಾವತಿ ಆಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಸಲ್ಲಿಕೆಯಾಗಿವೆ. ಡೌನ್‌ಡಿಟೆಕ್ಟರ್ ಮಾಹಿತಿ ಪ್ರಕಾರ ಸಂಜೆ 7.50ರ ಸುಮಾರಿಗೆ 2,500ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಗೂಗಲ್‌ ಪೇನಲ್ಲಿ 300ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದ ವೇದಿಕೆಯಲ್ಲೂ 350ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಯುಪಿಐ ವ್ಯವಸ್ಥೆ ಕಾರ್ಯನಿರ್ವಹಿಸದ ವಿರುದ್ಧ ಹಲವು ಟ್ವೀಟ್‌ಗಳು ಪೋಸ್ಟ್ ಆಗಿವೆ. ‘ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಯುಪಿಐ ಕಾರ್ಯನಿರ್ವಹಿಸದಿರುವುದನ್ನು ನೋಡಿದೆ. ಇದು ಬ್ಯಾಂಕ್ ಸಮಸ್ಯೆ ಅಲ್ಲ, ಬದಲಿಗೆ ಯುಪಿಐ ವ್ಯವಸ್ಥೆಯೇ ಸ್ಥಗಿತಗೊಂಡಿದೆ’ ಎಂದು ಎಕ್ಸ್‌ ವೇದಿಕೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ನೋವು ಹಂಚಿಕೊಂಡಿದ್ದಾರೆ.

‘ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂ ಯಾವುದರಲ್ಲೂ ಪಾವತಿಯಾಗುತ್ತಿಲ್ಲ. ಯುಪಿಐ ವ್ಯವಸ್ಥೆಗೆ ಏನಾದರೂ ಸಮಸ್ಯೆ ಆಗಿದೆಯೇ?’ ಎಂದು ಮತ್ತೊಬ್ಬರು ಕೇಳಿದ್ದಾರೆ.

ಹೋಟೆಲು, ತಿನಿಸು ಅಂಗಡಿಗಳಲ್ಲಿ ಗ್ರಾಹಕರು ಪಾವತಿಗಾಗಿ ಪರಿತಪಿಸುತ್ತಿದ್ದುದು ಕಂಡುಬಂತು ಎಂದು ಹಲವರು ಮಾಹಿತಿ ಹಂಚಿಕೊಂಡಿದ್ದಾರೆ. 

ಜನವರಿಯಲ್ಲಿ ದೇಶದಲ್ಲಿ 16.99 ಶತಕೋಟಿ ಯುಪಿಐ ಪಾವತಿಯಾಗಿದ್ದು, ₹23.48 ಲಕ್ಷ ಕೋಟಿ ಪಾವತಿಯಾಗಿದೆ. ರಿಟೇಲ್‌ ವಹಿವಾಟಿನಲ್ಲಿ ಶೇ 80ರಷ್ಟು ಪಾವತಿ ಯುಪಿಐ ಮೂಲಕವೇ ಆಗುತ್ತಿದೆ. ಇದು ದಾಖಲೆಯ ವಹಿವಾಟು ಎಂದು ಹಣಕಾಸು ಸಚಿವಾಲಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.