ನವದೆಹಲಿ / ಸಿಂಗಪುರ: ದೇಶದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 50 ಲಕ್ಷ ಬ್ಯಾರೆಲ್‌ನಷ್ಟು ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೇಟ್ (ಡಬ್ಲ್ಯುಟಿಐ) ದರ್ಜೆಯ ಕಚ್ಚಾ ತೈಲವನ್ನು ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ತೈಲವು ಕಂಪನಿಗೆ ಅಕ್ಟೋಬರ್ ಮತ್ತು ನವೆಂಬರ್‌ಗೆ ವಿತರಣೆಯಾಗಲಿದೆ ಎಂದು ತಿಳಿಸಿವೆ.
ಸ್ಪರ್ಧಾತ್ಮಕ ದರದಿಂದಾಗಿ ಭಾರತೀಯ ತೈಲ ಸಂಸ್ಕರಣಾಗಾರರು ಈ ತಿಂಗಳು ಅಮೆರಿಕದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸಿದ್ದಾರೆ. ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಬಿಕ್ಕಟ್ಟಿನ ನಡುವೆಯೇ ತೈಲ ಖರೀದಿಸಿರುವುದು ದೇಶದ ವ್ಯಾಪಾರ ಕೊರತೆಯನ್ನು ತಗ್ಗಿಸಲು ಸಹಾಯ ಮಾಡಲಿದೆ ಎಂದು ಹೇಳಿವೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ತಲಾ 20 ಲಕ್ಷ ಬ್ಯಾರೆಲ್ ಡಬ್ಲ್ಯುಟಿಐ ಕಚ್ಚಾ ತೈಲವನ್ನು ಖರೀದಿಸಿದೆ.
ಏಷ್ಯಾದ ಇತರ ರಾಷ್ಟ್ರಗಳ ಜೊತೆಗೂ ಭಾರತ ತೈಲ ಖರೀದಿಯನ್ನು ಹೆಚ್ಚಿಸಿಕೊಂಡಿವೆ. ಯುರೋಪ್‌ನ ಗನ್ವೋರ್ ಮತ್ತು ಈಕ್ವಿನಾರ್ ತಲಾ 20 ಲಕ್ಷ ಬ್ಯಾರೆಲ್ ಮತ್ತು ಮರ್ಕ್ಯುರಿಯಾ 10 ಲಕ್ಷ ಬ್ಯಾರೆಲ್ ತೈಲವನ್ನು ಐಒಸಿಗೆ ಮಾರಾಟ ಮಾಡಿದೆ. ಬಿಪಿಸಿಎಲ್ ನೈಜೀರಿಯಾದಿಂದ ತೈಲ ಖರೀದಿಸಿದೆ.
ಅಮೆರಿಕವು ಸುಂಕವನ್ನು ಶೇ 50ರಷ್ಟು ಹೆಚ್ಚಿಸಿದ ಬಳಿಕ ಭಾರತವು ಅಮೆರಿಕದಿಂದ ಹೆಚ್ಚಿನ ತೈಲವನ್ನು ಖರೀದಿಸುವ ಒತ್ತಡದಲ್ಲಿದೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.