
ನವದೆಹಲಿ: 2026ರ ಜನವರಿಯಲ್ಲಿ ವಾಹನಗಳ ಮಾರಾಟ ಪ್ರಮಾಣವು ಹಿಂದಿನ ವರ್ಷದ ಜನವರಿಗೆ ಹೋಲಿಸಿದರೆ ಶೇಕಡ 17.61ರಷ್ಟು ಹೆಚ್ಚಳ ದಾಖಲಿಸಿದೆ. ಈ ವರ್ಷದ ಜನವರಿಯಲ್ಲಿ 27 ಲಕ್ಷಕ್ಕಿಂತ ಹೆಚ್ಚು ವಾಹನಗಳು ಮಾರಾಟವಾಗಿವೆ.
ಜಿಎಸ್‌ಟಿ ದರ ಇಳಿಕೆಯ ನಂತರದಲ್ಲಿ ಬೇಡಿಕೆಯಲ್ಲಿ ಆಗಿರುವ ಚೇತರಿಕೆಯು ಮುಂದುವರಿದಿದೆ, ಗ್ರಾಮೀಣ ಪ್ರದೇಶಗಳಲ್ಲಿ ನಗದು ಹರಿವು ಆರೋಗ್ಯಕರವಾಗಿ ಇದೆ ಎಂದು ಡೀಲರುಗಳ ಸಂಘಟನೆ ಎಫ್‌ಎಡಿಎ ಹೇಳಿದೆ.
ಈ ವರ್ಷದ ಜನವರಿಯಲ್ಲಿ ಒಟ್ಟು 27.22 ಲಕ್ಷ ವಾಹನಗಳ ಮಾರಾಟ ಆಗಿದೆ. 5.13 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ದ್ವಿಚಕ್ರ ವಾಹನಗಳ ಮಾರಾಟವು ಶೇ 21ರಷ್ಟು ಹೆಚ್ಚಳ ಕಂಡಿದೆ ಎಂದು ಎಫ್‌ಎಡಿಎ ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ ಅವರು ಹೇಳಿದ್ದಾರೆ.
ತ್ರಿಚಕ್ರ ವಾಹನ ಹಾಗೂ ವಾಣಿಜ್ಯ ಬಳಕೆ ವಾಹನಗಳ ಮಾರಾಟ ಪ್ರಮಾಣವು ಕ್ರಮವಾಗಿ ಶೇ 19 ಹಾಗೂ ಶೇ 15ರಷ್ಟು ಹೆಚ್ಚಳ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.