ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿರುವ ₹213 ಕೋಟಿ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ತಿಳಿಸಿದೆ.
ವಾಟ್ಸ್‌ಆ್ಯಪ್‌ನಲ್ಲಿ ಸಂಗ್ರಹಿಸುವ ಬಳಕೆದಾರರ ಮಾಹಿತಿಯನ್ನು ಜಾಹೀರಾತು ಉದ್ದೇಶಗಳಿಗೆ ಮೆಟಾ ಕಂಪನಿಯು ತನ್ನ ಇತರೆ ಅಪ್ಲಿಕೇಷನ್‌ಗಳಲ್ಲಿ ಬಳಸದಂತೆ ಆಯೋಗವು, ಐದು ವರ್ಷದವರೆಗೆ ನಿರ್ಬಂಧ ವಿಧಿಸಿದೆ.
ಆದರೆ, 2021ರಲ್ಲಿ ವಾಟ್ಸ್‌ಆ್ಯಪ್‌ನ ನವೀಕೃತ ನೀತಿ ಅನ್ವಯ ಎಲ್ಲಾ ಬಳಕೆದಾರರು ಮೆಟಾದೊಂದಿಗೆ ದತ್ತಾಂಶ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಇದು ನ್ಯಾಯಸಮ್ಮತವಲ್ಲ ಎಂದು ಆಯೋಗ ಹೇಳಿದೆ.
ಸ್ಪರ್ಧಾತ್ಮಕತೆಗೆ ವಿರುದ್ಧವಾದ ನಿಯಮಗಳನ್ನು ಪಾಲಿಸಬಾರದು ಎಂದು ಮೆಟಾಗೆ ಸೂಚಿಸಿದೆ.
‘ನವೀಕೃತ ನೀತಿಯು ಬಳಕೆದಾರರ ವೈಯಕ್ತಿಕ ಗೋಪ್ಯ ಮಾಹಿತಿಗೆ ಹಾನಿ ಮಾಡುವುದಿಲ್ಲ. ಈ ನೀತಿಯಿಂದಾಗಿ ಇಲ್ಲಿಯವರೆಗೆ ಯಾವೊಬ್ಬ ಬಳಕೆದಾರನ ಖಾತೆಯು ಸ್ಥಗಿತಗೊಂಡಿಲ್ಲ’ ಎಂದು ಮೆಟಾ ವಕ್ತಾರರು ಹೇಳಿದ್ದಾರೆ.
ಅಲ್ಲದೆ, ಈ ನೀತಿಯು ವಾಟ್ಸ್‌ಆ್ಯಪ್‌ನ ಪೀಚರ್‌ಗಳ ಐಚ್ಛಿಕ ವ್ಯವಹಾರಕ್ಕೆ ಅವಕಾಶ ಕಲ್ಪಿಸುತ್ತದೆ. ದತ್ತಾಂಶ ಸಂಗ್ರಹ ಮತ್ತು ಬಳಕೆಯ ಪಾರದರ್ಶಕತೆಗೆ ಮತ್ತಷ್ಟು ಅವಕಾಶ ಒದಗಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.