ADVERTISEMENT

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮಾರ್ಚ್ 16ವರೆಗೂ ಇಡಿ ವಶಕ್ಕೆ 

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 13:56 IST
Last Updated 11 ಮಾರ್ಚ್ 2020, 13:56 IST
ರಾಣಾ ಕಪೂರ್
ರಾಣಾ ಕಪೂರ್   

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರ ಬಂಧನ ಅವಧಿಯನ್ನು ಮಾರ್ಚ್ 16ರವರೆಗೆ ವಿಸ್ತರಿಸಲಾಗಿದೆ.

ರಾಣಾ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಪೂರ್ ಅವರು ₹30,000 ಕೋಟಿ ಸಾಲ ಮಂಜೂರು ಮಾಡಿದ್ದು ಅದರಲ್ಲಿ ₹20,000 ಕೋಟಿ ಹಣ ವಸೂಲಾಗದ ಸಾಲ (ಎನ್‌ಪಿಎ) ಆಗಿತ್ತು. ಇದೀಗ ವಸೂಲಾಗದ ಸಾಲ ಯಾವುದು ಎಂಬುದರ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ: ಮಾರ್ಚ್ 11ರವರೆಗೂ ಇಡಿ ವಶಕ್ಕೆ ಯೆಸ್ ಬ್ಯಾಂಕ್ ಸ್ಥಾಪಕ

ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಯೆಸ್ ಬ್ಯಾಂಕ್ ಸಿಇಒ ಆಗಿರುವ ರಾಣಾ ಕಪೂರ್‌ನ್ನುಮಾರ್ಚ್ 8ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ADVERTISEMENT

ಜಾರಿ ನಿರ್ದೇಶನಾಲಯವು ರಾಣಾ ಅವರನ್ನು ಬುಧನಾರ ಹಣ ವರ್ಗಾವಣೆ ತಡೆ ನ್ಯಾಯಾಲಯ (ಪಿಎಂಎಲ್‍ಎ)ಕ್ಕೆ ಹಾಜರು ಪಡಿಸಿದ್ದು, ಬಂಧನ ಅವಧಿ ವಿಸ್ತರಿಸುವಂತೆ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.