ADVERTISEMENT

Zee Entertainment | ಪುನೀತ್‌ ಗೋಯೆಂಕಾ ಮರುನೇಮಕ ಪ್ರಸ್ತಾವ ತಿರಸ್ಕಾರ

ಪಿಟಿಐ
Published 29 ನವೆಂಬರ್ 2024, 14:08 IST
Last Updated 29 ನವೆಂಬರ್ 2024, 14:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಜೀ ಎಂಟರ್‌ಟೈನ್‌ಮೆಂಟ್‌ನ ಷೇರುದಾರರು ಪುನೀತ್‌ ಗೋಯೆಂಕಾ ಅವರನ್ನು ಕಂಪನಿಯ ನಿರ್ದೇಶಕರಾಗಿ ಮರು ನೇಮಕ ಮಾಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

ಪುನೀತ್‌ ಗೋಯೆಂಕಾ ಅವರ ಮರು ನೇಮಕಾತಿ ನಿರ್ಣಯವನ್ನು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಯಿತು. ಕಂಪನಿ ಕಾಯ್ದೆ 2013ರ ಪ್ರಕಾರ ಶೇ 50ರಷ್ಟು ಮತ ಪಡೆದಿರಬೇಕು. ಆದರೆ, ಗೋಯೆಂಕಾ ಮತವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಜಿಇಇಎಲ್‌) ಷೇರುಪೇಟೆಗೆ ತಿಳಿಸಿದೆ. ಗೋಯೆಂಕಾ ಪ್ರಸ್ತುತ ಕಂಪನಿಯ ಸಿಇಒ ಆಗಿದ್ದಾರೆ.

ಈ ಹಿಂದೆ, ಹಲವು ಸಂಸ್ಥೆಗಳು ಗೋಯೆಂಕಾ ಅವರ ನೇಮಕಕ್ಕೆ ವಿರುದ್ಧವಾಗಿ ಮತ ಚಲಾಯಿಸುವಂತೆ ಷೇರುದಾರರಿಗೆ ಸಲಹೆ ನೀಡಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.