ADVERTISEMENT

ಜೊಮಾಟೊ ಷೇರು ಶೇ 4ರಷ್ಟು ಹೆಚ್ಚಳ

ಪಿಟಿಐ
Published 9 ಫೆಬ್ರುವರಿ 2024, 16:04 IST
Last Updated 9 ಫೆಬ್ರುವರಿ 2024, 16:04 IST
<div class="paragraphs"><p>ಷೇರು ಪೇಟೆ  </p></div>

ಷೇರು ಪೇಟೆ

   

ನವದೆಹಲಿ: ಆನ್‌ಲೈನ್‌ ಆಹಾರ ವಿತರಣಾ ಸಂಸ್ಥೆಯಾದ ಜೊಮಾಟೊ ಲಿಮಿಟೆಡ್‌ನ ಷೇರಿನ ಮೌಲ್ಯ ಶುಕ್ರವಾರ ಶೇ 4ರಷ್ಟು ಏರಿಕೆಯಾಗಿದೆ.

2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯು ₹138 ಕೋಟಿ ನಿವ್ವಳ ಲಾಭ ಗಳಿಸಿದ ನಂತರ ಈ  ಹೆಚ್ಚಳವಾಗಿದೆ ಎಂದು ಕಂಪನಿಯು ತಿಳಿಸಿದೆ. 

ADVERTISEMENT

ಹಿಂದಿನ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯು ₹347 ಕೋಟಿ ನಿವ್ವಳ ನಷ್ಟ ಕಂಡಿತ್ತು. ಈ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ವರಮಾನವು ₹1,948 ಕೋಟಿಯಿಂದ ₹3,288 ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ಷೇರು ಸೂಚ್ಯಂಕ ಏರಿಕೆ: ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಖರೀದಿ ಹೆಚ್ಚಳದಿಂದಾಗಿ ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 167 ಅಂಶ ಏರಿಕೆಯಾಗಿ 71,595ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 64 ಅಂಶ ಹೆಚ್ಚಳವಾಗಿ 21,782ರಲ್ಲಿ ಅಂತ್ಯಗೊಂಡಿತು. 

ಪೇಟಿಎಂ ಷೇರು ಮತ್ತೆ ಕುಸಿತ: ಪೇಟಿಎಂನ ಮಾತೃಸಂಸ್ಥೆಯಾದ ಒನ್‌97 ಕಮ್ಯುನಿಕೇಷನ್‌ ಲಿಮಿಟೆಡ್‌ನ ಷೇರು ಮೌಲ್ಯ ಸತತ ಎರಡು ದಿನಗಳಿಂದ ಶೇ 15.48ರಷ್ಟು ಕುಸಿತ ಕಂಡಿದೆ.

ಬಿಎಸ್‌ಇಯಲ್ಲಿ ಶೇ 6.09 ಮತ್ತು ಎನ್‌ಎಸ್‌ಇಯಲ್ಲಿ ಶೇ 6.15ರಷ್ಟು ಇಳಿಕೆಯಾಗಿದೆ. ಎರಡು ದಿನಗಳಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ₹4,870 ಕೋಟಿ ಕರಗಿದೆ.

ಕರಾಚಿ ಸೂಚ್ಯಂಕ ಕುಸಿತ: ಪಾಕಿಸ್ತಾನದ ಚುನಾವಣಾ ಫಲಿತಾಂಶದ ಅನಿಶ್ಚಿತತೆಯಿಂದಾಗಿ ಕರಾಚಿ ಷೇರು ಸೂಚ್ಯಂಕ (ಕೆಎಸ್‌ಇ–100) ಶುಕ್ರವಾರ ಕುಸಿದಿದೆ. 1,720 ಅಂಶ ಇಳಿಕೆಯಾಗಿ 62,423ರಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ಗುರುವಾರದ ವಹಿವಾಟಿನಲ್ಲಿ 64,143 ಅಂಶಗಳಿಗೆ ಕೊನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.