ADVERTISEMENT

ಬ್ರೋಕರೇಜ್‌ ಮಾತು: ‘ಡೆಲ್ಲಿವರಿ’ ಕಂಪನಿ ಷೇರು ಮೌಲ್ಯ ಏರಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 4:32 IST
Last Updated 10 ಜುಲೈ 2025, 4:32 IST
   

ಸರಕು ಸಾಗಣೆ ಕ್ಷೇತ್ರದ ಮುಖ್ಯ ಕಂಪನಿಗಳಲ್ಲಿ ಒಂದಾಗಿರುವ ‘ಡೆಲ್ಲಿವರಿ’ಯ ಷೇರು ಮೌಲ್ಯವು ₹480ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿ ಮೋತಿಲಾಲ್‌ ಓಸ್ವಾಲ್‌ ಹೇಳಿದೆ. ಸರಕುಗಳನ್ನು ತ್ವರಿತವಾಗಿ ಸಾಗಾಟ ಮಾಡಿಕೊಡುವ ಮಾರುಕಟ್ಟೆಯಲ್ಲಿ ಈ ಕಂಪನಿಯು ಶೇಕಡ 20ಕ್ಕಿಂತ ಹೆಚ್ಚಿನ ಪಾಲನ್ನು ಕಂಪನಿಯು ಹೊಂದಿದೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ. 2021ರಲ್ಲಿ ಸ್ಪಾಟ್‌ಆನ್‌ ಲಾಜಿಸ್ಟಿಕ್ಸ್‌ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ನಂತರ ಡೆಲ್ಲಿವರಿ ಕಂಪನಿಯು ಪಿಟಿಎಲ್‌ ವಿಭಾಗದಲ್ಲಿ ಅಸ್ತಿತ್ವವನ್ನು ವೇಗವಾಗಿ ಹೆಚ್ಚಿಸಿಕೊಂಡಿದೆ.

ಬಳಕೆದಾರರ ಸಂಖ್ಯೆ ಹೆಚ್ಚಳ, ಇ–ವಾಣಿಜ್ಯದ ವಿಸ್ತರಣೆಯ ಕಾರಣದಿಂದಾಗಿ ಸರಕುಗಳನ್ನು ತ್ವರಿತವಾಗಿ ಸಾಗಿಸಿಕೊಡಬೇಕಿರುವ ವಿಭಾಗದಲ್ಲಿ ಆಗಿರುವ ಬೆಳವಣಿಗೆಯ ಲಾಭವನ್ನು ಪಡೆದುಕೊಳ್ಳುವ ಸ್ಥಿತಿಯಲ್ಲಿ ಡೆಲ್ಲಿವರಿ ಕಂಪನಿ ಇದೆ ಎಂದು ಕೂಡ ಅದು ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಡೆಲ್ಲಿವರಿ ಕಂಪನಿಯ ಷೇರು ಮೌಲ್ಯವು ₹419.40 ಆಗಿತ್ತು.

(ಬ್ರೋಕರೇಜ್‌ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.