
ಇಂಡಿಗೊ ವಿಮಾನಯಾನ ಸಂಸ್ಥೆಯ ಮಾತೃ ಸಂಸ್ಥೆಯಾದ ‘ಇಂಟರ್‌ಗ್ಲೋಬ್ ಏವಿಯೇಷನ್’ನ ಷೇರುಗಳು ಬಿಎಸ್‌ಇನಲ್ಲಿ ಸೋಮವಾರ ಬೆಳಗ್ಗಿನ ವಹಿವಾಟಿನ ಆರಂಭದಲ್ಲಿ ಶೇ 6.6ರಷ್ಟು ಕುಸಿತ ಕಂಡಿವೆ.
ವಿಮಾನಗಳ ಕಾರ್ಯಾಚರಣೆಯ ವ್ಯತ್ಯಯಕ್ಕೆ ಕಾರಣ ಕೇಳಿ ಸಿಇಒ ಹಾಗೂ ವ್ಯವಸ್ಥಾಪಕರಿಗೆ ನೀಡಿದ್ದ ಕಾರಣ ಕೇಳಿ ನೋಟಿಸ್‌ಗೆ ಉತ್ತರಿಸಲು ಡಿಜಿಸಿಎ ಸಮಯಾವಕಾಶ ವಿಸ್ತರಿಸಿದ್ದು ಹಾಗೂ ವಿಮಾನಗಳ ರದ್ದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.
ಈ ನಡುವೆ ಡಿಸೆಂಬರ್ 10ಕ್ಕೆ ವಿಮಾನಗಳ ಕಾರ್ಯಾಚರಣೆಗಳು ಈ ಹಿಂದಿನಂತೆ ನಡೆಯಲಿದೆ ಎಂದು ಇಂಡಿಗೊ ಹೇಳಿದೆ.
ಕಳೆದ ಐದು ದಿನಗಳಲ್ಲಿ ಇಂಡಿಗೊದ ಷೇರು ಮೌಲ್ಯ ಸುಮಾರು ಶೇ 13ರಷ್ಟು ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.