
ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಸಾಂಪ್ರದಾಯಿಕ ಹೂಡಿಕೆಗಳನ್ನು ನೆಚ್ಚಿಕೊಂಡಿದ್ದ ಜನ ಈಗ ಮ್ಯೂಚುವಲ್ ಫಂಡ್, ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ಕಳೆದ ಐದು ವರ್ಷದಲ್ಲಿ ದೇಶದ ಕುಟುಂಬಗಳ ಒಟ್ಟು ಸಂಪತ್ತಿನಲ್ಲಿ ಶೇ 13ರಷ್ಟು ಹೆಚ್ಚಳವಾಗಿದ್ದು, 2024–25ರ ಆರ್ಥಿಕ ವರ್ಷದಲ್ಲಿ ₹1,300 ಲಕ್ಷ ಕೋಟಿ– ₹1,400 ಲಕ್ಷ ಕೋಟಿಯ ಮಟ್ಟದಲ್ಲಿದೆ.
ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮ್ಯೂಚುವಲ್ ಫಂಡ್ ಮತ್ತು ಷೇರುಗಳಲ್ಲಿ ಹೂಡಿಕೆ ಪ್ರಮಾಣ ಶೇ 15ರಿಂದ ಶೇ 20ರಷ್ಟು ಇದೆ. ಅಮೆರಿಕದಲ್ಲಿ ಈ ಪ್ರಮಾಣ ಶೇ 50ರಿಂದ ಶೇ 60 ಮತ್ತು ಬ್ರೆಜಿಲ್‌ನಲ್ಲಿ ಶೇ 40ರಿಂದ ಶೇ 45ರಷ್ಟಿದೆ ಎಂದು ಸಲಹಾ ಸಂಸ್ಥೆ ಬೈನ್ ಆ್ಯಂಡ್ ಕಂಪನಿ ಮತ್ತು ಆನ್‌ಲೈನ್ ಹೂಡಿಕೆ ವೇದಿಕೆ ‘ಗ್ರೋವ್’ನ ಹೌ ಇಂಡಿಯಾ ಇನ್ವೆಸ್ಟ್–2025 ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.